ಪುತ್ತೂರಿನ ಸರಕಾರಿ ಐಟಿಐಯಲ್ಲಿ ಆ. 19ರಂದು ಸುಳ್ಯ ಕೆವಿಜಿ ಐಟಿಐಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 24 ಮಂದಿ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರದ ಇಂಡಸ್ಟ್ರಿಯಲ್ ಟ್ರೈನಿಂಗ್ ಮತ್ತು ಎಂಪ್ಲಾಯ್‌ಮೆಂಟಲ್ ಇಲಾಖೆಯ ವತಿಯಿಂದ ಸುಮಾರು ರೂ. 15 ಸಾವಿರ ಮೌಲ್ಯದ ಟೂಲ್‌ಕಿಟ್‌ಗಳನ್ನು ವಿತರಿಸಲಾಯಿತು.
ಸಂಸ್ತೆಯ 2022-24 ಮತ್ತು 3023-2025ನೇ ಸಾಲಿನ ಎಲೆಕ್ಟ್ರಾನಿಕ್, ಮೆಕ್ಯಾನಿಕ್, ಇಲೆಕ್ಟ್ರಿಕಲ್ ಮೆಕ್ಯಾನಿಕ್ ಮೋಟಾರು ವಾಹನ ವಿಭಾಗದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು.
















ವಿತರಣಾ ಕಾರ್ಯದಲ್ಲಿ ಪುತ್ತೂರು ಸರಕಾರಿ ಐಟಿಐ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ರಾಜೀವಿ, ಕೆವಿಜಿ ಐಟಿಐ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ, ಹಾಗೂ ಸಿಬ್ಬಂದಿಗಳಾದ ಸತ್ಯನಾರಾಯಣ ಮತ್ತು ಸುಧಾಕರ ಭಾಗವಹಿಸಿದ್ದರು.



