














ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ‘ರಿ’ ಅಡಿಯಲ್ಲಿ ಜ್ಞಾನ ವಿಕಾಸ ವತಿಯಿಂದ ಆ. ೨೨ ರಂದು ಪೈಲಾರಿನಲ್ಲಿ ಪೌಷ್ಟಿಕ ಆಹಾರ ಮತ್ತು ವರಮಹಾಲಕ್ಷ್ಮಿ ಪೂಜೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಜ್ಞಾನ ವಿಕಾಸದ ಸದಸ್ಯರಾದ ಪದ್ಮಾವತಿ ವಹಿಸಿದರು.
ಸಂಪನ್ಮೂಲ ವ್ಯಕ್ತಿ ಪೈಲಾರು ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿಯವರು ಮಕ್ಕಳಿಗೆ ಉತ್ತಮ ಆಹಾರ ಮತ್ತು ಮಕ್ಕಳ ಬೆಳವಣಿಗೆ ಸೊಪ್ಪು ತರಕಾರಿ ಮೊಳಕೆ ಬರಿಸಿದ ದವಸಧಾನ್ಯಗಳನ್ನು ಕೋಡಬೇಕೆಂದು ಮಾಹಿತಿ ನೀಡಿದರು.
ವಲಯದ ಅಧ್ಯಕ್ಷರಾದ ದಯಾನಂದ ಗುಡ್ಡೆಮನೆ ಜನಜಾಗೃತಿ ವಲಯಾಧ್ಯಕ್ಷರಾದ ಬಾಲಕೃಷ್ಣ ಬೊಳ್ಳೂರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಾನಕಿ ತಾಲೂಕಿನ ಸಮನ್ವಯಾಧಿಕಾರಿ ಲಕ್ಷ್ಮಿ, ವಲಯದ ಮೇಲ್ವಿಚಾಕರಾದ ಜಯಶ್ರೀ, ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷರಾದ ನಾರಾಯಣ ಕೋಡ್ತುಗುಳಿ, ಸೇವಾ ಪ್ರತಿನಿಧಿ ಚಂದ್ರಪ್ರಕಾಶ್ ಪಡ್ಪು ಉಪಸ್ಥಿತರಿದ್ದರು.
ಜ್ಞಾನ ವಿಕಾಸದ ಸಂಯೋಜಕಿಯಾದ ನಾಗವೇಣಿ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಸದಸ್ಯರಾದ ಮನೋರಮಾ ಕಡಪಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸದಸ್ಯರಾದ ಲಲಿತಾಂಬಿಕ ಸ್ವಾಗತಿಸಿ, ಜಯಶ್ರೀ ವಂದಿಸಿದರು
ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಮತ್ತು ಒಕ್ಕೂಟದ ಸದಸ್ಯರು ಮತ್ತು ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










