ನಾಗರಿಕ ಸೇವಾ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ಆಶ್ರಯದಲ್ಲಿ 42ನೇ ವರ್ಷದ ನಾಡಹಬ್ಬ ಗಣೇಶೋತ್ಸವ -2025 ಆ. 27ರಂದು ನಡೆಯಲಿದೆ.
ಬೆಳಿಗ್ಗೆ 9.00ಕ್ಕೆ ಗಣಪತಿ ಪ್ರತಿಷ್ಠೆ, ಪೂಜಾ ಕಾರ್ಯ, ಮಧ್ಯಾಹ್ನ ಮಹಾಮಂಗಳಾರತಿ ಪ್ರಸಾದ ಭೋಜನ, ರಾತ್ರಿ 8.00 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಕುಣಿತ ಭಜನೆಯೊಂದಿಗೆ ನಾಸಿಕ್ ಬೀಟ್ಸ್ ಜೊತೆಯಾಗಿ ವೈಭವದ ಶೋಭಾಯಾತ್ರೆ ನಡೆದು ಬೊಮ್ಮನಮಜಲು ಹೊಳೆಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದೆ.















ಅಪರಾಹ್ನ 12 ಗಂಟೆಗೆ ಸಮಿತಿಯ ಅಧ್ಯಕ್ಷ ದಿವಾಕರ ಮುಪ್ಪೇರ್ಯ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಪ್ರದೀಪ್ ಕುಮಾರ್ ರೈ ಪನ್ನೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಯಶೋಧರ ನಾರಾಲುರವರಿಗೆ ಗೌರವಾರ್ಪಣೆ ನಡೆಯಲಿದೆ. ಸಂಜೆ 6.30ರಿಂದ ನೃತ್ಯ ಸಂಭ್ರಮ ನಡೆಯಲಿದೆ.










