ರೂ. 29,30,42,178 ವ್ಯವಹಾರ, ವ್ಯಾಪಾರ ಲಾಭ ರೂ. 5633233















ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ಆ. 30ರಂದು ನಡೆಯಿತು.

ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ದುರ್ಗಾದಾಸ್ ಎಂ, ಭರತ್ ನೆಕ್ರಾಜೆ, ಮಹೇಶ್ ಮುತ್ಲಾಜೆ, ಲೋಕೇಶ್ವರ ಡಿ.ಆರ್, ಹರೀಶ್ ಚಿಲ್ತಡ್ಕ, ಹೊನ್ನಪ್ಪ ಗೌಡ ಎಚ್, ಕರುಣಾಕರ ಎಚ್, ಶ್ರೀಮತಿ ಶಶಿಕಲಾ ದೇರಪಜ್ಜನ ಮನೆ, ಮಾಹಾಲಿಂಗ ಬಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಲಕ್ಷ್ಮೀ ಕೆ. ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಸಂಘದ ಉಪಾಧ್ಯಕ್ಷರಾಗಿದ್ದು ಇತ್ತೀಚೆಗೆ ನಿಧನರಾದ ಶ್ರೀಮತಿ ಸರೋಜಿನಿ ಮುಳುಗಾಡು ಅವರಿಗೆ ಒಂದು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಪೂರ್ಣಚಂದ್ರ ಬೊಮ್ಮದೇರೆ ಪ್ರಾರ್ಥಿಸಿದರು. ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಲಕ್ಷ್ಮೀ. ಕೆ ವರದಿ ವಾಚಿಸಿದರು.
ಭರತ್ ನೆಕ್ರಾಜೆ ಸ್ವಾಗತಿಸಿ,
ಲೋಕೇಶ್ವರ ಡಿ.ಆರ್ ವಂದಿಸಿದರು.
ಶಿವಪ್ರಸಾದ್ ಹಾಲೆಮಜಲು ಕಾರ್ಯಕ್ರಮ ನಿರೂಪಿಸಿದರು.











