














2024-25 ನೇ ಸಾಲಿನಲ್ಲಿ ಸಾಲದ ತಗಾದೆ ಶೇ 100 ವಸೂಲಾತಿಗಾಗಿ ಪಂಬೆತ್ತಾಡಿ ಪ್ರಾಥಮಿಕ ಸಹಕಾರಿ ಸಂಘಕ್ಕೆ ಜಿಲ್ಲಾ ಬ್ಯಾಂಕ್ ಪ್ರಶಸ್ತಿ ದೊರಕಿದೆ. ಆ. 30ರಂದು ನಡೆದ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಪ್ರಶಸ್ತಿಯನ್ನು ಬ್ಯಾಂಕಿನ ಅಧ್ಯಕ್ಷರಾದ ಡಾ. ಯಂ.ಎನ್ ರಾಜೇಂದ್ರ ಕುಮಾರ್ ಸಂಘದ ಅಧ್ಯಕ್ಷರಾದ ಮಹೇಶ್ ಕುಮಾರ್ ಕೆ ಯಸ್ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ ಪುರುಷೋತ್ತಮ ಶೆಟ್ಟಿ ಯವರಿಗೆ ನೀಡಿ ಗೌರವಿಸಿದರು.
ಈ ಸಂಧರ್ಭದಲ್ಲಿ ಸಂಘಧ ಉಪಾಧ್ಯಕ್ಷರಾದ ಗಣೇಶ್ ಭೀಮಗುಳಿ, ಧರ್ಮಣ್ಣ ನಾಯ್ಕ ಜಿ, ವೆಂಕಪ್ಪ ಯನ್.ಪಿ ಉಪಸ್ಥಿತರಿದ್ದರು.










