ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಯಜ್ಞೇಶ್ ಆಚಾರ್ ಅವರಿಂದ ಅನ್ನದಾನ ಸೇವೆ

0

“ದಾನಗಳಲ್ಲಿ ಮಹಾದಾನ ಅನ್ನದಾನ” ಎಂದು ಹೇಳುವ ಮಾತಿನಂತೆ . ಸುಬ್ರಹ್ಮಣ್ಯದ ಉದ್ಯಮಿ, ಕಲಾ ಪೋಷಕ ಶ್ರೀಯುತ ಯಜ್ಞೇಶ್ ಆಚಾರ್ಯ ಅವರು, ಏಕಾದಶಿಯ ಪವಿತ್ರ ದಿನವಾದ ಸೆ‌. 3 ರಂದು ಸಾವಿರಾರು ಭಕ್ತರಿಗೆ ಅನ್ನದಾನ ಸೇವೆ ನೆರವೇರಿಸಿದರು.

ಈ ಅನ್ನದಾನ ಸೇವೆಯನ್ನು ಅವರು ಕಳೆದ 12 ವರ್ಷಗಳಿಂದ ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ. ಈ ವರ್ಷವೂ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎದುರು ಇರುವ ಸಭಾ ವೇದಿಕೆಯಲ್ಲಿ, ಬಂದಿದ್ದ ಭಕ್ತಾದಿಗಳಿಗೆ ಹೃದಯಪೂರ್ವಕವಾಗಿ ಅನ್ನವನ್ನು ನೀಡಲಾಯಿತು. ಸುಮಾರು 3 ಸಾವಿರ ಭಕ್ತರು ಈ ಸೇವೆಯನ್ನು ಸ್ವೀಕರಿಸಿದರು.

ಶ್ರೀಯುತ ಯಜ್ಞೇಶ್ ಆಚಾರ್ಯರು ಕುಕ್ಕೆ ಸುಬ್ರಹ್ಮಣ್ಯ ರಥ ಬೀದಿಯ “ಶ್ರೀ ರಾಘವೇಂದ್ರ ಪ್ರಸಾದ್ ಹೋಟೆಲ್” ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಅನೇಕ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಅಲ್ಲದೇ, ಸಂಗೀತ ಕ್ಷೇತ್ರದಲ್ಲಿಯೂ ತಮ್ಮ ಕಲೆ ಮತ್ತು ಸಾಧನೆಯಿಂದ ಜನಪ್ರಿಯತೆ ಗಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ರಥ ಬೀದಿಯಲ್ಲಿ ನಡೆದ 55ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಈ ವರ್ಷದ ಗಣೇಶೋತ್ಸವವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿದ್ದಾರೆ. ಗಣೇಶೋತ್ಸವ ಬಳಿಕ ಬರುವ ಮೊದಲ ಏಕಾದಶಿ ದಿನ ಅವರು ಈ ಸೇವೆಯನ್ನು ನೀಡುತಿದ್ದಾರೆ.