ಆಕರ್ಷಕ ದಫ್ ಹಾಗೂ ಸ್ಕೌಟ್ ಪ್ರದರ್ಶನ
ಈದ್ ಮೀಲಾದ್ ಹಬ್ಬಾಚರಣೆಯ ಅಂಗವಾಗಿ ಮೊಗರ್ಪಣೆ ಜುಮ್ಮಾ ಮಸೀದಿಯಲ್ಲಿ ಮೀಲಾದ್ ಸಂದೇಶ ಜಾಥಾ ಹಾಗೂ ಆಕರ್ಷಕ ದಫ್ ಮತ್ತು ಸ್ಕೌಟ್ ಪ್ರದರ್ಶನ ನಡೆಯಿತು.















ಸ್ಥಳೀಯ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸೀ ಫುಡ್ ರವರು ಧ್ವಜಾರೋಹಣ ನೆರವೇರಿಸಿದರು.
ಸ್ಥಳೀಯ ಖತೀಬರಾದ ಅಬ್ದುಲ್ ಖಾದರ್ ಸಕಾಫಿ ಅಲ್ ಖಾಮಿಲ್ ರವರು ಪ್ರಾರ್ಥನೆ ನೆರವೇರಿಸಿ ಮಿಲದ್ ಸಂದೇಶ ಜಾಥಾಕ್ಕೆ ಚಾಲನೆ ನೀಡಿದರು.

ಜಾಥಾದಲ್ಲಿ ಮದ್ರಸಾ ವಿದ್ಯಾರ್ಥಿಗಳಿಂದ ಆಕರ್ಷಕ ದಫ್ ಪ್ರದರ್ಶನ ಸ್ಕೌಟ್ ನಡೆಯಿತು. ಮೊಗರ್ಪಣೆಯಿಂದ ಜ್ಯೋತಿ ವೃತ್ತದ ವರೆಗೆ ಜಾಥಾ ಸಾಗಿ ಬಂದಿತು.
ಈದ್ ಮೀಲಾದ್ ಅಂಗವಾಗಿ ಮೌಲೂದ್ ಪಾರಾಯಣ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಜಮಾಅತ್ ಸಮಿತಿಯ ಪದಾಧಿಕಾರಿಗಳು ಹಾಗೂ ಊರಿನ ನೂರಾರು ಮಂದಿ ಮುಸಲ್ಮಾನ ಬಾಂಧವರು ಭಾಗವಹಿಸಿದ್ದರು.










