ಕಾಯರ್ತೋಡಿ: ಸೂರ್ತಿಲ ಶ್ರೀ ರಕ್ತೇಶ್ವರಿ ಸಾನಿಧ್ಯದಲ್ಲಿ ಸಂಕ್ರಮಣ ಪೂಜೆ

0


ಕಾಯರ್ತೋಡಿ ಸೂರ್ತಿಲ ಶ್ರೀ ರಕ್ತೇಶ್ವರಿ ಸಾನಿಧ್ಯದಲ್ಲಿ ಸಂಕ್ರಮಣ ಪೂಜೆ ಪ್ರಯುಕ್ತ ಭಜನಾ ಕಾರ್ಯಕ್ರಮ, ತಂಬಿಲ ಸೆ. 16 ರಂದು ನಡೆಯಿತು.


ಈ ಸಂದರ್ಭದಲ್ಕಿ ಶಾರದಾಂಬೋತ್ಸವದ ಆಮಂತ್ರಣ ಇಟ್ಟು ಪ್ರಾರ್ಥನೆ ಮಾಡಲಾಯಿತು. ಅಲ್ಲದೆ ಸೆಪ್ಟೆಂಬರ್ 24 ಆರಂಬೂರಿನಲ್ಲಿ ಪ್ರಾರಂಭಗೊಳ್ಳಲಿರುವ ರಸಪಾಕಮ್ ಹೋಟೆಲಿನ ಆಮಂತ್ರಣ ಇಟ್ಟು ವಿಶೇಷ ಪ್ರಾರ್ಥನೆ ಮಾಡಲಾಯಿತು.

ಹೋಟೆಲ್ ಕಟ್ಟಡ ಮಾಲಕ ಕೃಷ್ಣ ಕಾಮತ್, ಹೋಟೆಲ್ ಮಾಲಕ ನಾರಾಯಣ ಕೇಕಡ್ಕ, ಸುಪ್ರೀತಾ ಕೇಕಡ್ಕ, ಗಣೇಶ್ ಅಳ್ವ, ಸುಮಿತ್ರಾ ಇಂಜಿನಿಯರ್, ಶಶಿಧರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ನಗರ ಪಂಚಾಯತ್ ಸದಸ್ಯರು ಪ್ರವೀತಾ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು. ಉಪಾಹಾರದ ವ್ಯವಸ್ಥೆಯನ್ನು ಶ್ರೀಮತಿ ಮತ್ತು ಶ್ರೀ ಗಣೇಶ್ ಆಳ್ವ ಮತ್ತು ಮನೆಯವರು ನೆರವೇರಿಸಿದರು.