ಜಾಲ್ಸೂರು ಗ್ರಾಮದ ವಿನೋಬಾನಗರ ನಿವಾಸಿ ಶ್ರೀಮತಿ ಚಂದ್ರಾವತಿ ಎಂಬವರು ಹೃದಯಾಘಾತದಿಂದ ಸೆ.19ರಂದು ನಿಧನರಾಗಿದ್ದಾರೆ. ಅವರಿಗೆ ಸುಮಾರು 65 ವರ್ಷ ವಯಸ್ಸಾಗಿತ್ತು.
ಮನೆಯಲ್ಲಿ ಒಬ್ಬರೇ ವಾಸವಾಗಿದ್ದ ಇವರಿಗೆ ಅಸೌಖ್ಯವಾಗಿತ್ತು. ಸೆ.18ರಂದು ಸುಳ್ಯಕ್ಕೆ ಆಸ್ಪತ್ರೆಗೆ ಹೋಗಿ ಅವರು ಔಷಧ ಪಡೆದು ಮನೆಗೆ ಬಂದಿದ್ದರು. ಬಳಿಕ ಕುಶಾಲನಗರದಲ್ಲಿರುವ ಸಹೋದರಿ ಶಶಿಕಲಾರಿಗೆ ಫೋನ್ ಮಾಡಿ ಆಸ್ಪತ್ರೆಗೆ ಹೋಗಿಬಂದ ವಿಷಯ ತಿಳಿಸಿದ್ದರೆನ್ನಲಾಗಿದೆ. ಸೆ.18ರಂದು ರಾತ್ರಿಯಿಂದ ಶಶಿಕಲಾರವರು ಚಂದ್ರಾವತಿ ಯವರಿಗೆ ಕರೆ ಮಾಡಿದರೂ ಅವರು ಸ್ವೀಕರಿಸಿರಲಿಲ್ಲ. ಮರು ದಿನ ಬೆಳಗ್ಗೆ ಯಿಂದ ಕರೆಮಾಡಿದರೂ ಕರೆ ಸ್ವೀಕರಿಸಲಿಲ್ಲ. ಮನೆಯ ಕೆಲಸದವರು ಮನೆಗೆ ಬಂದು ನೋಡಿದಾಗ ಮನೆಯೊಳಗೆ ಚಯರಿನ ಮೇಲೆ ಕುಳಿತಂತೆ ಇದ್ದರು. ಕರೆದರೂ ಮಾತನಾಡುತ್ತಿರಲಿಲ್ಲ.
ವಿಷಯ ಸಂಬಂಧಿಕರಿಗೆ ತಿಳಿಸಲಾಯಿತು. ಅವರು ಬಂದು ನೋಡಿದಾಗ ಚಂದ್ರಾವತಿ ಯವರ ದೇಹ ತಣ್ಣಗಾಗಿ ಉಸಿರು ನಿಂತಿತ್ತೆನ್ನಲಾಗಿದೆ. ಕುಶಾಲನಗರ ದಿಂದ ಸಹೋದರಿ ಶಶಿಕಲಾ ಬಂದರು. ಪೋಲೀಸರಿಗೂ ಮಾಹಿತಿ ತಿಳಿಸಲಾಯಿತು. ಬಳಿಕ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಪೋಸ್ಟ್ ಮಾರ್ಟಂ ಮಾಡಿ, ಸುಳ್ಯ ಕೊಡಿಯಾಲಬೈಲು ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತೆಂದು ತಿಳಿದುಬಂದಿದೆ.















ಚಂದ್ರಾವತಿಯವರ ಒಬ್ಬ ಪುತ್ರ ನಿತೀನ್ ಕೆಲ ತಿಂಗಳ ಹಿಂದಷ್ಟೇ ಅಸೌಖ್ಯದಿಂದ ನಿಧನರಾಗಿದ್ದರು.
ಕೃಷಿಕರಾಗಿದ್ದ ಇವರು ಏಳೆಂಟು ನಾಯಿಗಳನ್ನು ಸಾಕುತಿದ್ದರು.
ಮೃತರು ಸಹೋದರಿಯರಾದ ಶಶಿಕಲಾ, ಭಾರತಿ, ಪುತ್ರ ನವೀನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










