ದಿ.ಲಿಂಗಪ್ಪ ಗೌಡ ನಿಡ್ಡಾಜೆಯವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಐವರ್ನಾಡು ಗ್ರಾಮದ ನಿಡ್ಡಾಜೆ ಲಿಂಗಪ್ಪ ಗೌಡರು ಸೆ.10 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಹಾಗೂ ವೈಕುಂಠ ಸಮಾರಾಧನೆಯು ಸೆ.28 ರಂದು ನಿಡ್ಡಾಜೆ ಮನೆಯಲ್ಲಿ ನಡೆಯಿತು.

ಶಿಕ್ಷಕ ಅಜಿತ್ ಐವರ್ನಾಡುರವರು ದಿ.ಲಿಂಗಪ್ಪ ನಿಡ್ಡಾಜೆಯವರ ಆದರ್ಶ ಜೀವನ ಹಾಗೂ ಅವರ ಗುಣಗಳನ್ನು ನೆನಪಿಸಿಕೊಂಡು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನರು ಲಿಂಗಪ್ಪ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಸುಶೀಲ, ಪುತ್ರರಾದ ಹೊನ್ನಪ್ಪ ಗೌಡ ನಿಡ್ಡಾಜೆ,ವಸಂತ ಗೌಡ ನಿಡ್ಡಾಜೆ, ಪುತ್ರಿಯರಾದ
ಶ್ರೀಮತಿ ಜಾನಕಿ, ಶ್ರೀಮತಿ ಶೀಲಾವತಿ, ಶ್ರೀಮತಿ ಪುಷ್ಪಾವತಿ ,ಸೊಸೆಯಂದಿರಾದ ಶ್ರೀಮತಿ ಪ್ರೇಮ ಹೊನ್ನಪ್ಪ ಗೌಡ, ಶ್ರೀಮತಿ ಬೇಬಿ ವಸಂತ ಹಾಗೂ ಅಳಿಯಂದಿರಾದ
ಹುಕ್ರಪ್ಪ ಗೌಡ ಪುಣ್ಚತ್ತಾರು, ಚಂದ್ರಶೇಖರ ಪೊನ್ನೆಟ್ಟಿ, ಸುಧಾಕರ ಪಾಲೆಪ್ಪಾಡಿ , ಕುಟುಂಬಸ್ಥರು ಉಪಸ್ಥಿತರಿದ್ದರು.