














ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಮತ್ತು ಚಿಗುರು ಗೆಳೆಯರ ಬಳಗ (ರಿ.) ಪಂಬೆತ್ತಾಡಿ ವತಿಯಿಂದ ಪಂಚಸಪ್ತತಿ ಸ್ವಚ್ಚತಾ ಅಭಿಯಾನ 2025, 75 ದಿನಗಳ ಸ್ವಚ್ಚತಾ ಅಭಿಯಾನದ ಚಾಲನೆಯನ್ನು ಒ.:10 ರ ಸಂಜೆ 6:00ಕ್ಕೆ ಕರಿಕ್ಕಳ ಭಾಗದಲ್ಲಿರುವ ಬಸ್ಸು ತಂಗುದಾಣ ಹಾಗೂ ರಸ್ತೆಬದಿ ಸ್ವಚ್ಛತೆ ಮಾಡುವ ಮೂಲಕ ನೆರವೇರಿತು.
ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಶ್ರೀ ಪವನ್ ಪಲ್ಲತ್ತಡ್ಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಲ್ಮಡ್ಕ ಗ್ರಾ.ಪಂ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ, ಚಿಗುರು ಗೆಳೆಯರ ಬಳಗದ ಅಧ್ಯಕ್ಷರಾದ ಅಶ್ವತ್ ಬಾಬ್ಲುಬೆಟ್ಟು, ಕಾರ್ಯದರ್ಶಿ ರಮೇಶ್ ಮಡಿವಾಳಮಜಲು, ಸ್ಥಾಪಕದ್ಯಕ್ಷರಾದ ಶ್ರೀನಿವಾಸ್. ಬಿ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾದ ಜನಾರ್ದನ ನಾಗತೀರ್ಥ, ಚಿಗುರು ಗೆಳೆಯರ ಬಳಗದ ಸದಸ್ಯರು ಭಾಗವಹಿಸಿದರು.










