ಬೆಳ್ಳಾರೆ – ದರ್ಖಾಸ್ತು ರಸ್ತೆ ಅಗಲೀಕರಣ – ರಸ್ತೆ ಬದಿ ಮರ ತೆರವು ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಅರಣ್ಯಾಧಿಕಾರಿಗಳ ಜೊತೆ ಮಾತುಕತೆ

0

ಬೆಳ್ಳಾರೆ ದರ್ಖಾಸ್ತು ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ನಡೆಯುತ್ತಿದ್ದು ರಸ್ತೆ ಬದಿ ಇರುವ ಮರಗಳಿಂದ ಕಾಮಗಾರಿಗೆ ತೊಂದರೆಯಾಗಿದೆ.
ಇದರಿಂದ ರಸ್ತೆ ಅಗಲೀಕರಣ ಕಾಮಗಾರಿ ಕೆಲವು ಕಡೆಗಳಲ್ಲಿ ಬಾಕಿಯಾಗಿತ್ತು.


ಇಂದು ಶಾಸಕಿ ಭಾಗೀರಥಿ ಮುರುಳ್ಯರವರು ರಸ್ತೆ ಕಾಮಗಾರಿ ನಡೆಯುವಲ್ಲಿಗೆ ತೆರಳಿ ಕಾಮಗಾರಿಗೆ ತೊಂದರೆಯಾಗುವ ಮರಗಳನ್ನು ತೆಗೆಯುವಂತೆ ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಾತುಕತೆ ನಡೆಸಿದರೆಂದು ತಿಳಿದು ಬಂದಿದೆ.
ಪಿಡಬ್ಲ್ಯುಡಿ ಇಂಜಿನಿಯರ್ ಪರಮೇಶ್ವರ್,ಎಸ್.ಐ.ಈರಯ್ಯ ಜೊತೆಗಿದ್ದರು.


ಈ ಸಂದರ್ಭದಲ್ಲಿ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಶ್ರೀನಾಥ ರೈ ಬಾಳಿಲ, ಐವರ್ನಾಡು ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಪದ್ಮನಾಭ ಬೀಡು,ಗಂಗಾಧರ ರೈ ಪುಡ್ಕಜೆ,ಶಾಂತಾರಾಮ ಕಣಿಲೆಗುಂಡಿ,ಶೇಖರ ಮಡ್ತಿಲ, ಮೋನಪ್ಪ ತಂಬಿನಮಕ್ಕಿ,ನವೀನ ಕುಮಾರ್ ರೈ ಮಬಿನಮಕ್ಕಿ,ಆರೀಫ್ ಬೆಳ್ಳಾರೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.