ಮಂಡೆಕೋಲು ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ವತಿಯಿಂದ ಪಂಚಸಪ್ತತಿ ಸ್ವಚ್ಚತಾ ಅಭಿಯಾನ

0

ಸುಳ್ಯ ಯುವಜನ ಸಂಯುಕ್ತ ಮಂಡಳಿ – ಮಂಡೆಕೋಲು ವೀರವನಿತೆ ಕ್ರಿಡಾ ಮತ್ತು ಕಲಾ ಸಂಘದ ವತಿಯಿಂದ ಪಂಚಸಪ್ತತಿ ಸ್ವಚ್ಚತಾ ಅಭಿಯಾನದ ಕಾರ್ಯಕ್ರಮ ಅ.೧೦ರಂದು ಮಂಡೆಕೋಲು ಪೇಟೆಯಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ ಪಂಚಸಪ್ತತಿ ಅಭಿಯಾನಕ್ಕೆ ಚಾಲನೆ ನೀಡಿದರು. ಮಂಡೆಕೋಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಕರ ಬಾಲಮಂದಿರ ಮಡಿಕೇರಿ ಇದರ ನಿವೃತ್ತ ಅಧೀಕ್ಷಕ ಶಾರದಾ ರಾಮನ್, ಮಂಡೆಕೋಲು ಸಹಕಾರ ಸಂಘದ ನಿರ್ದೇಶಕ ಲಕ್ಷ್ಮಣ ಉಗ್ರಾಣಿಮನೆ, ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ. ಶುಭಹಾರೈಸಿದರು.


ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಪೆರಾಜೆ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಗ್ರಾ.ಪಂ. ಸದಸ್ಯರುಗಳಾದ ಉಷಾ ಗಂಗಾಧರನ್, ಗೀತಾ ಮಾವಂಜಿ, ಪ್ರಮುಖರಾದ ಗಂಗಾಧರನ್ ಮಾವಂಜಿ, ರಾಮಚಂದ್ರ ಮಣಿಯಾಣಿ, ಹರೀಶ್ಚಂದ್ರ ಪಾತಿಕಲ್ಲು, ಬಾಬು ಮಾರ್ಗ, ಗ್ರಾ.ಪಂ. ಸಂಜೀವಿನಿ ಒಕ್ಕೂಟದ ಚಂದ್ರಾವತಿ, ಮಂಜುಳ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ವೀರವನಿತೆ ಕ್ರೀಡಾ ಮತ್ತು ಕಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಗ್ರಾ.ಪಂ. ಬಸ್ ನಿಲ್ದಾಣ, ಸಂತೆ ಮಾರುಕಟ್ಟೆ, ಸರಕಾರಿ ಬಾವಿ ಹಾಗೂ ರಸ್ತೆ ಬದಿ ಕಾಡು ಕಡಿದು ಕಸ ಹೆಕ್ಕಿ ಸ್ವಚ್ಛತೆ ಮಾಡಲಾಯಿತು.
ಯುವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷೆ ವಿನುತಾ ಪಾತಿಕಲ್ಲು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಂಘದ ಅಧ್ಯಕ್ಷೆ ವಸಂತಿ ಉಗ್ರಾಣಿಮನೆ ವಂದಿಸಿದರು.