ಆಲೆಟ್ಟಿ: ಬೊಳ್ಳೂರು ಭಾಗದಲ್ಲಿ ಟಿ. ಸಿ ಕೆಟ್ಟು ವಿದ್ಯುತ್ ಸಂಪರ್ಕ ಸ್ಥಗಿತ

0

5 ದಿನಗಳಿಂದ ಕತ್ತಲಲ್ಲಿ ಕಳೆಯುತ್ತಿರುವ 22 ಬಡ ಕುಟುಂಬಗಳು

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಬೊಳ್ಳೂರು ಭಾಗದಲ್ಲಿ ಕಳೆದ 5-6 ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಸುಮಾರು 22 ಮನೆಗಳಲ್ಲಿ ಕತ್ತಲು ಕವಿದಿದೆ.
ಅ.13 ರಂದು ರಾತ್ರಿ ಹೊಡೆದ ಗುಡುಗು ಸಿಡಿಲಿಗೆ ಬೊಳ್ಳೂರು ಎಂಬಲ್ಲಿರುವ ಅತೀ ಹಳೆಯದಾದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸುಟ್ಟು ಕೆಟ್ಟು ಹೋಗಿದೆ. ಇದರಿಂದಾಗಿ ಈ ಭಾಗದಲ್ಲಿ ರುವ ಪ. ಜಾತಿ ಮತ್ತು
ಪ. ಪಂಗಡಕ್ಕೆ ಸೇರಿದ ಸುಮಾರು 22 ಮನೆಗಳ ವಿದ್ಯುತ್ ಸಂಪರ್ಕ ಕಡಿತವಾಗಿ ಕತ್ತಲು ಆವರಿಸಿದೆ. ವಿದ್ಯುತ್ ಇಲ್ಲದೆ ನೀರಿನ ಟ್ಯಾಂಕ್ ನಲ್ಲಿ ನೀರು ಖಾಲಿಯಾಗಿ ಕುಡಿಯುವ ನೀರಿನ ಸಮಸ್ಯೆಯು ಎದುರಾಗಿದೆ. ಮೊಬೈಲ್ ಫೋನ್ ಗಳು ಚಾರ್ಜ್ ಇಲ್ಲದೆ ನಿಷ್ಕ್ರೀಯಗೊಂಡು ಸಂಪರ್ಕಿಸಲು ಸಾಧ್ಯ ವಿಲ್ಲದಂತಾಗಿದೆ.
ಈ ಬಗ್ಗೆ ಸ್ಥಳೀಯ ನಿವಾಸಿಗಳು ಮೆಸ್ಕಾಂ ಅಧಿಕಾರಿಯವರಿಗೆ ದೂರು ನೀಡಿದ್ದಾರೆ. ಇಲಾಖೆಯವರು ಸದ್ಯದ ಪರಿಸ್ಥಿತಿಯಲ್ಲಿ ಸುಳ್ಯದಲ್ಲಿ ಟಿ. ಸಿ. ಇಲ್ಲದಿರುವುದರಿಂದ ಪುತ್ತೂರಿನಿಂದ ಅಥವಾ ಕಡಬದಿಂದತರಿಸಬೇಕಾಗಿದೆ. ಟಿ. ಸಿ ಬರುವ ತನಕ ಕಾಯುವಂತೆ ಹೇಳಿರುತ್ತಾರೆ. ಕ್ರೈನ್ ಮೂಲಕ ನೀವೇ ತರಿಸುವ ವ್ಯವಸ್ಥೆ ಮಾಡುವುದಾದರೆ ಕಡಬದಿಂದ ತರಿಸಿಕೊಡಬಹುದು ಎಂದು ಇಲಾಖೆಯಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
5 ದಿನಗಳಿಂದ ಪಡುತ್ತಿರುವ ತೊಂದರೆಯ ಕುರಿತು
ಸ್ಥಳೀಯ ಪಂಚಾಯತ್ ನ ಸದಸ್ಯರ ಗಮನಕ್ಕೆ ತರಲಾಗಿದೆ. ಯಾವುದೇ ರೀತಿಯ ವ್ಯವಸ್ಥೆ ಇಲ್ಲಿಯವರೆಗೆ ಮಾಡಿಲ್ಲ.
ಈ ಬಗ್ಗೆ ಯಾರು ಕೂಡ ಮುತುವರ್ಜಿ ವಹಿಸದೆ ಬಡ ಕುಟುಂಬಗಳನ್ನು ಕತ್ತಲಲ್ಲಿ ಕಳೆಯುವಂತೆ ಮಾಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರಸ್ತುತ ಕಾಲದಲ್ಲಿ ವಿದ್ಯುತ್ ಇಲ್ಲದೆ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ ಹಾಗಾಗಿ ಸಂಬಂಧಪಟ್ಟ ಇಲಾಖೆಯವರು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯ ಪ್ರವೃತ್ತರಾಗುವಂತೆ ಸ್ಥಳೀಯರು ಅಗ್ರಹಿಸಿರುತ್ತಾರೆ.