ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂಬಂತೆ ಪಾಸ್ ಆಗುವ ಕನಿಷ್ಟ ಅಂಕವನ್ನು ಇಳಿಕೆ ಮಾಡಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು ೬೦೦ ಕ್ಕೆ ೧೯೮ ಅಂಕ ಪಡೆದರೆ ಪಾಸ್ ಆಗುತ್ತಾರೆ .ಇನ್ನು ಮುಂದೆ ಉತ್ತೀರ್ಣ ಅಂಕವನ್ನು ೩೩ಕ್ಕೆ ನಿಗದಿ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
ಇನ್ನು ಮುಂದೆ ಉತ್ತೀರ್ಣ ಅಂಕವನ್ನು ೩೩ಕ್ಕೆ ನಿಗದಿ ಮಾಡಲಾಗುವುದು . ಕನ್ನಡ ಭಾಷೆಗೆ ನಿಗದಿ ಮಾಡಿರುವ ೧೨೫ ಅಂಕವನ್ನು ೧೦೦ಕ್ಕೆ ಇಳಿಸುವ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ. ಸಾರ್ವಜನಿಕರ ಅಭಿಪ್ರಾಯವನ್ನು ತೆಗೆದುಕೊಂಡ ಬಳಿಕ ನಿರ್ಧಾರ ಮಾಡುತ್ತೇವೆ. ಎಲ್ಲ ವಿಷಯಗಳಿಗೆ ನಿಗದಿ ಮಾಡಿರುವ ಉತ್ತೀರ್ಣ ಅಂಕ ೩೫ ಅನ್ನು ೩೩ಕ್ಕೆ ಇಳಿಸುವ ಬಗ್ಗೆ ಚರ್ಚಿಸಲು ಸಾರ್ವಜನಿಕ ವಲಯಕ್ಕೆ ಬಿಟ್ಟಿದ್ದೆವು. ಅದರಲ್ಲಿ ಸುಮಾರು ೭೦೧ ಮಂದಿ ೩೩ ಅಂಕಗಳ ಪರವಾಗಿಯೂ ಹಾಗೂ ೩೫ರ ಪರವಾಗಿ ಕೇವಲ ೮ ಅಭಿಪ್ರಾಯಗಳು ಬಂದವು.
ಹೀಗಾಗಿ ಈ ಶೈಕ್ಷಣಿಕ ವರ್ಷದಿಂದ ನಮ್ಮ ರಾಜ್ಯದಲ್ಲಿ ಉತ್ತೀರ್ಣ ಅಂಕವನ್ನು ೩೩ಕ್ಕೆ ನಿಗದಿ ಮಾಡಲಾಗಿದೆ. ಈ ಬಗ್ಗೆ ನಾಳೆ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಎಂದು ತಿಳಿಸಿದರು.















ಪಾಸಿಂಗ್ ಮಾರ್ಕ್ಸ್ ಕಡಿತ ಮಾಡುವ ವಿಚಾರವನ್ನು ಶಾಲಾ ಪರೀಕ್ಷಾ ಮಂಡಳಿ ಕರಡು ಅಧಿಸೂಚನೆ ಮೂಲಕ ಸಾರ್ವಜನಿಕ ಡೊಮೇನ್‌ಗೆ ಹಾಕಿ ಅಭಿಪ್ರಾಯ ಕೇಳಿತ್ತು. ಶೇ. ೩೩ರಷ್ಟು ಅಂಕದ ಪರವಾಗಿ ೭೦೧ ಪತ್ರಗಳು ಬಂದಿದ್ವು. ಆದರೆ, ಶೇ. ೩೫ ಅಂಕ ಪರವಾಗಿ ಕೇವಲ ೮ ಪತ್ರಗಳು ಬಂದಿದ್ದವು. ಹೀಗಾಗಿ ಬಹುಮತದ ಅಭಿಪ್ರಾಯಕ್ಕೆ ಮನ್ನಣೆ ನೀಡಿ ೨೦೨೫-೨೬ನೇ ಸಾಲಿನಿಂದ ಶೇ. ೩೩ರಷ್ಟು ಮಾನದಂಡವನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಪರೀಕ್ಷಾ ಅವ್ಯವಸ್ಥೆಯನ್ನು ಸುಧಾರಣೆ ತರುವುದು ಮುಖ್ಯವಾಗಿತ್ತು. ಮಕ್ಕಳು ಬೇರೆ ವ್ಯವಸ್ಥೆಯಲ್ಲಿ ಪಾಸ್ ಆದ್ರೆ ಮುಂದೆ ತೊಂದರೆಯಾಗುತ್ತೆ. ಹೀಗಾಗಿ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲಾಯಿತು. ಮೂರು ಬೋರ್ಡ್ ಪರೀಕ್ಷೆಗಳು ಉತ್ತಮ ಪರಿಣಾಮ ಬೀರಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಸಿಎಂ ನೀಡಿದ ಶೇ. ೭೫ರಷ್ಟು ಗುರಿಯ ಬದಲಿಗೆ ಈ ವರ್ಷ ಶೇ. ೭೯ರಷ್ಟು ತೇರ್ಗಡೆ ಪ್ರಮಾಣ ರೀಚ್ ಆಗಲು ಸಾಧ್ಯವಾಯಿತು. ವೆಬ್ ಕಾಸ್ಟಿಂಗ್‌ನಿಂದ ಪರೀಕ್ಷೆಗಳು ಕಟ್ಟುನಿಟ್ಟು ಆಗಿದ್ದು, ಯಾವುದೇ ಲೋಪದೋಷಗಳಿಲ್ಲದೆ ನಡೆದಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.










