5 ದಿನಗಳ ಬಳಿಕ ಮೃತ ದೇಹ ತಾಯ್ನಾಡಿಗೆ- ಅಂತ್ಯಸಂಸ್ಕಾರ
ನಾಲ್ಕೂರು ಗ್ರಾಮದ ಕಲ್ಲಾಜೆ ನಿವಾಸಿ ನಂದನ್ ಎಂಬವರು ಮಾರಿಷಸ್‌ನಲ್ಲಿ ಬಿದ್ದು ಮೃತಪಟ್ಟಿದ್ದು, ಐದು ದಿನಗಳ ಬಳಿಕ ಮೃತ ದೇಹ ತಾಯ್ನಾಡಿಗೆ ತಂದು ಅ. ೧೭ ತಡರಾತ್ರಿ ಅಂತ್ಯ ಸಂಸ್ಕಾರ ನಡೆಸಿರುವುದಾಗಿ ತಿಳಿದು ಬಂದಿದೆ.















ಕಲ್ಲಾಜೆಯ ಜಯಲಕ್ಷ್ಮಿ ಭಟ್ ಎಂಬವರ ಪುತ್ರರಾಗಿರುವ ನಂದನ್ ಮಾರಿಷಸ್ ನಲ್ಲಿ ಅ.13 ರಂದು ಮೃತಪಟ್ಟಿದ್ದರು. ಮೃತ ದೇಹವನ್ನು ತಾಯ್ನಾಡಿಗೆ ತರಳು ಸಂಬಂಧಿಕರು ಸಂಸದರನ್ನು ಕೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸಂಸದ ಬ್ರಿಜೇಶ್ ಚೌಟಾ ಅವರು ಮೃತ ದೇಹವನ್ನು ಊರಿಗೆ ತರಿಸುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಅ.೧೭ ರಾತ್ರಿ ಮೃತ ದೇಹ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು ಅಲ್ಲಿಗೆ ಅಂಬ್ಯೂಲೆನ್ಸ್ ತೆರಳಿ ಮೃತ ದೇಹ ಊರಿಗೆ ತರಲಾಗಿದೆ. ಮುಂಜಾನೆ ೪ ರ ಸುಮಾರಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿರುವುದಾಗಿ ತಿಳಿದು ಬಂದಿದೆ.










