ದೀಪಾವಳಿಯ ತ್ರಯೋದಶಿದಂದು ಸುಬ್ರಹ್ಮಣ್ಯದಲ್ಲಿ ಭಕ್ತರ ದಟ್ಟಣೆ

0

ದೀಪಾವಳಿಯ ಆರಂಭದ ತ್ರಯೋದಶಿ ದಿನದಂದು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಬಂದು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಶ್ರೀ ದೇವಳದ ಒಳಾಂಗಣ ಹಾಗೂ ಹೊರಗಣದಲ್ಲಿ, ಎಲ್ಲಂದರಲ್ಕಿ ಭಕ್ತರ ದಟ್ಟಣೆ ಕಂಡು ಬಂತು. ಹಾಗೆ ನಾಗ ಪ್ರತಿಷ್ಠಾ ಮಂಟಪದ ಮುಂಭಾಗದಲ್ಲಿ ಕೂಡ ನಾಗ ಪ್ರತಿಷ್ಠೆ ಸೇವೆಗಾಗಿ ಭಕ್ತಾದಿಗಳು ಕಾದು ಕುಳಿತಿದ್ದರು. ಮಧ್ಯಾಹ್ನದ ಮಹಾಪೂಜೆ ಗಾಗಿ ಬೆಳಿಗ್ಗೆ ಗಂಟೆ 11:30ಯಿಂದಲೇ ಶ್ರೀ ದೇವಳದ ಒಳಾಂಗಣ ಪ್ರವೇಶ ನಿಶಿದ್ಧವಾದರಿಂದ ಹನ್ನೆರಡು ಗಂಟೆಯ ಮಹಾಪೂಜೆ ಕಳೆದು 12.20 ರಿಂದ ಭಕ್ತಾದಿಗಳನ್ನ ಶ್ರೀ ದೇವರ ದರ್ಶನಕ್ಕೆ ಬಿಡಲಾಯಿತು.

ರವಿವಾರವಾದ್ದರಿಂದ ಎಂದಿನಂತೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿಯೇ ಈ ಕ್ಷೇತ್ರಕ್ಕೆ ಆಗಮಿಸಿದ್ದರು ಎಲ್ಲಾ ವಾಹನ ಪಾರ್ಕಿಂಗ್ ಸ್ಥಳಗಳು ಭರ್ತಿಯಾ ಗಿದ್ದವು . ಶ್ರೀ ದೇವಳದ ವತಿಯಿಂದ ಅನ್ನಪ್ರಸಾದ ಭೋಜನವನ್ನು ಸುಸಜ್ಜಿತವಾಗಿ ವ್ಯವಸ್ಥೆಗೊಳಿಸಲಾಗಿತ್ತು. . ಈ ದೇವಳದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಭದ್ರತಾ ಸಿಬ್ಬಂದಿಗಳು, ಭಕ್ತರ ಸೇವೆಗಾಗಿ ಶ್ರಮಿಸುತ್ತಿದ್ದರು.