ಎಡಮಂಗಲ ಗ್ರಾಮದ ಸುದ್ದಿ ಬಿಡುಗಡೆಯ ಹಿರಿಯ ಏಜೆಂಟ್ ಹಾಗೂ ಪ್ರತಿನಿಧಿ ಕಜೆ ಜತಪ್ಪ ಗೌಡರ ಪತ್ನಿ ಯುಗ್ಮಾವತಿ ಅಲ್ಪಕಾಲದ ಅಸೌಖ್ಯದಿಂದ ಕಜೆ ಮನೆಯಲ್ಲಿ ಅ. 22 ರಂದು ನಿಧನರಾದರು.















ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತಿ ಜತ್ತಪ್ಪ ಗೌಡ, ಪುತ್ರ ಉಮೇಶ್ ಕಜೆ, ಸೊಸೆ ಅಶ್ವಿತಾ ಉಮೇಶ್, ಪುತ್ರಿ ಸ್ಮಿತಾ ಹೊಸೂರು, ಅಳಿಯ ಕಿರಣ್ ಹೊಸೂರು, ಮೊಮ್ಮಕ್ಕಳು, ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.










