ಹಳೆಗೇಟು ಗುಂಡಿಯಡ್ಕ ನಿವಾಸಿ ಜಿ.ಅಬೂಬಕ್ಕರ್ ರವರ ಪತ್ನಿ ಆಯಿಷಾ (60ವರ್ಷ) ರವರು ಅ 27ರಂದು ತಡರಾತ್ರಿ ನಿಧನರಾಗಿದ್ದಾರೆ.















ರಾತ್ರಿ ಸುಮಾರು 8 ಗಂಟೆಗೆ ರಕ್ತದೊತ್ತಡ ಕಡಿಮೆಯಾದ ಹಿನ್ನೆಲೆಯಲ್ಲಿ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದೋಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತಿ ಅಬೂಬಕ್ಕರ್ ಹಾಗೂ ಪುತ್ರಿ ಉಮ್ಮಹಿಬಾ,ಬಂಧು ಮಿತ್ರರನ್ನು ಅಗಲಿದ್ದಾರೆ.
ಮಯ್ಯಿತ್ ನಮಾಜ್ ಝುಹರ್ ನಮಾಜ್ ಬಳಿಕ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.










