ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ತಾಪನಾ ಸಮಿತಿ ಅಧ್ಯಕ್ಷರಾಗಿ ಜಗದೀಶ್ ಪಡ್ಪು ಇಂದು ಆಯ್ಕೆಯಾಗಿದ್ದಾರೆ.
ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ ಉಪಸ್ಥಿತಿಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕಿಯೆ ನಡೆಯಿತು.
ಸಮಿತಿ ಸದಸ್ಯ ಬೆಳ್ಯಪ್ಪ ಖಂಡಿಗೆ ಜಗದೀಶ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿ, ಗುಣವರ್ದನ ಕೆದಿಲ ಅನುಮೋದಿಸಿದರು. ಸಮಿತಿ ಸದಸ್ಯರಾದ ವಿನೂಪ್ ಮಲ್ಲಾರ, ದಯಾನಂದ ಕಟ್ಟೆಮನೆ, ಕೇಶವ ಕೊಪ್ಪತಡ್ಕ, ಸವಿತಾ ಕಟ್ಟೆಮನೆ, ಪದ್ಮಿನಿ ಎನ್. ಜಿ, ಅರ್ಚಕ ಸುಬ್ರಹ್ಮಣ್ಯ ನರಸಿಂಹ ಜೋಶಿ ಉಪಸ್ಥಿತರಿದ್ದರು.















ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮೊದಲು ವ್ಯವಸ್ಥಾಪನಾ ಸಮಿತಿ ಸದಸ್ಯರೆಲ್ಲರೂ ಮಹಾಪೂಜೆ ಯಲ್ಲಿ ಪಾಲ್ಗೊಂಡರು. ಪ್ರಧಾನ ಅರ್ಚಕರು ದೇವರ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.










