ಸೂಚನೆ: ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮದ ಹಿನ್ನೆಲೆ

0

ಪಶು ಆಸ್ಪತ್ರೆ ಸುಳ್ಯದಲ್ಲಿ ಚಿಕಿತ್ಸಾ ಸಮಯದ ಬದಲಾವಣೆ

ಸುಳ್ಯ ತಾಲೂಕಿನಾದ್ಯಂತ ನ. 03 ರಿಂದ ಡಿ.2. ರವರೆಗೆ ಸುಮಾರು 30 ದಿನಗಳ ಕಾಲ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮ ನಡೆಯಲಿರುವುದರಿಂದ ತಾಲೂಕಿನ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ನಿರತರಾಗಿರುತ್ತಾರೆ.

ಆದ್ದರಿಂದ ಪಶು ಆಸ್ಪತ್ರೆ ಸುಳ್ಯದಲ್ಲಿ ನಾಯಿ ಬೆಕ್ಕು ಮತ್ತು ಇತರ ಸಾಕು ಪ್ರಾಣಿಗಳ ದೈನಂದಿನ ಚಿಕಿತ್ಸಾ ಸೇವೆಯನ್ನು ಮಧ್ಯಾಹ್ನ 02.00 ರಿಂದ 4.00 ಗಂಟೆಯ ಒಳಗೆ ಮಾತ್ರ ನಿಗಧಿಪಡಿಸಲಾಗಿದೆ.

ಈ ಅವಧಿಯಲ್ಲಿ ಹಸು ಎಮ್ಮೆ ಗಳ ತುರ್ತು ಚಿಕಿತ್ಸೆಗಾಗಿ ಇಲಾಖೆಯ ಪಸು ಸಂಜೀವಿನಿ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 1962 ಕರೆ ಮಾಡುವಂತೆ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ
ಸುಳ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.