ಮಂತ್ರಾಲಯ ಯಾತ್ರೆ ಪೋಸ್ಟರ್ ಹಾಗೂ ಸ್ಕೀಮ್ ಕಾರ್ಡ್ ಬಿಡುಗಡೆ
ಸುಳ್ಯದ ಸಿ . ಎ ಬ್ಯಾಂಕ್ ಬಿಲ್ಡಿಂಗ್ ನಲ್ಲಿ ರುವ ಯಧುಪ್ರಿಯ ಕ್ರಿಯೇಷನ್ಸ್ ನಲ್ಲಿ ಬಟ್ಟೆ ಮಳಿಗೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿದ ಹಾಗೂ ಸುಳ್ಯ ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ (ಪ್ರಗತಿ ಅಚ್ಚುಗೆ ಸನ್ಮಾನ ಸಂಸ್ಥೆಯ ಪರವಾಗಿ ನ.೧
ರಂದು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ. ಬಿ ಪೌಂಡೇಷನ್ ನ ಅಧ್ಯಕ್ಷರಾದ ಎಂ. ಬಿ ಸದಾಶಿವ ಅವರು ಸಂಸ್ಥೆಯ ಪರವಾಗಿ ಪ್ರಗತಿ ಅಚ್ಚುವನ್ನು ಗೌರವಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಬಳಿಕ ಸಂಸ್ಥೆಯ ವತಿಯಿಂದ ಆಯೋಜನೆಗೊಂಡ ಕಂತಿನ ಸ್ಕೀಮ್ ಕಾರ್ಡ್ ಅನಾವರಣ ಹಾಗೂ ಸಂಸ್ಥೆಯ ವತಿಯಿಂದ ಡಿ.೧೩&೧೫ ರಂದು ಮಂತ್ರಾಲಯ , ಹಂಪಿ , ಚಿತ್ರದುರ್ಗ, ಬೇಲೂರು, ಹಳೆಬೀಡು ಮೊದಲಾದ ಸ್ಥಳಗಳಿಗೆ ಯಾತ್ರೆಯ ಪೋಸ್ಟರನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಎ.ಜಿ. ಭವಾನಿ, ಕೃಷ್ಣ ಕೊಡಶೇರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಮಧುಸೂಧನ , ಶ್ರೀಮತಿ ಯಶೋಧ , ಮಕ್ಕಳಾದ ಯಧು ಕೃಷ್ಣ , ವಿಷ್ಣು ಪ್ರಿಯ, ಸಿಬ್ಬಂದಿ ಮಧುಶ್ರೀ ಲೋಕೇಶ್ , ಬಂಧು ಮಿತ್ರರು, ಉಪಸ್ಥಿತರಿದ್ದರು.















ಕಾರ್ಯಕ್ರಮದ ಕೊನೆಗೆ ಅತಿಥಿಗಳಿಗೆ ಸಂಸ್ಥೆಯ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮಧುಸೂಧನ ಸರ್ವರನ್ನು ಸ್ವಾಗತಿಸಿ , ವಂದಿಸಿದರು.










