ಐವರ್ನಾಡು ಸಹಕಾರಿ ಸಂಘದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಮಾಹಿತಿ ಶಿಬಿರ

0

ಶಿಬಿರಗಳಿಂದ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಲು ಸಾಧ್ಯ : ಎಸ್.ಎನ್.ಮನ್ಮಥ

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರವು ಅ.10 ರಿಂದ ಐವರ್ನಾಡು ಸಹಕಾರಿ ಸಂಘದ ಸಭಾಭವನದಲ್ಲಿ ಪ್ರಾರಂಭಗೊಂಡಿದ್ದು ನ.01 ರಂದು ಮಾಹಿತಿ ಶಿಬಿರವು ನಡೆಯಿತು.
ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಎಸ್.ಎನ್.ಮನ್ಮಥರವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.


ಬಳಿಕ ಮಾತನಾಡಿ ಐವರ್ನಾಡು ಸಹಕಾರಿ ಸಂಘ ನಿರಂತರವಾಗಿ ಗ್ರಾಮದ ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ಇಟ್ಟುಕೊಳ್ಳಲು ಉಚಿತ ಯೋಗ ಶಿಬಿರವನ್ನು ನಡೆಸಲಾಯಿತು.


ಹಲವಾರು ಜನ ಸದಸ್ಯರು,ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಡರು.
ನಂತರ ಫುಟ್ ಪಲ್ಸ್ ಥೆರಫಿಯನ್ನು ಉಚಿತವಾಗಿ ಪ್ರಾರಂಭ ಮಾಡಿದೆವು ಪ್ರಾರಂಭದಲ್ಲಿ ಸ್ವಲ್ಪ ಜನರು ಬರತೊಡಗಿದರು.
ನಂತರ ಹೆಚ್ಚು ಹೆಚ್ಚು ಜನರು ಬಂದು ಇದರ ಸದುಪಯೋಗ ಪಡೆದುಕೊಂಡರು ಎಂದು ಹೇಳಿದರು.ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು.
ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು.ಸಹಕಾರಿ ಸಂಘ ಯಾವಾಗಲೂ ಜನರೊಂದಿಗಿದೆ ,ಜನರಿಗೆ ಸ್ಪಂದಿಸುತ್ತದೆ,ಸಹಕಾರ ನೀಡುತ್ತದೆ ಎಂದು ಹೇಳಿದರು.
ಪೂಟ್ ಪಲ್ಸ್ ಥೆರಪಿ ಮುಖ್ಯ ಪ್ರವರ್ತಕರಾದ ರತ್ನಾಕರ ಶೆಟ್ಟಿಯವರು ಪೂಟ್ ಪಲ್ಸ್ ಥೆರಫಿ ಬಗ್ಗೆ ಮಾಹಿತಿ ನೀಡಿದರು.


ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಮಹೇಶ್ ಜಬಳೆ,ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ,ಕೆವಿಜಿ ಐಟಿಐ ನಿವೃತ್ತ ಕಚೇರಿ ಅಧೀಕ್ಷಕ ಕರುಣಾಕರ ಮಡ್ತಿಲ,ಕೆವಿಜಿ ಪಾಲಿಟೆಕ್ನಿಕ್ ನಿವೃತ್ತ ಕಚೇರಿ ಅಧೀಕ್ಷಕ ಪ್ರಾಂಶುಪಾಲ ಬಾಲಚಂದ್ರ ಪಲ್ಲತ್ತಡ್ಕ,ನಿವೃತ್ತ ಶಿಕ್ಷಕ ಗಣಪತಿ ಭಟ್,
ಸಹಕಾರಿ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.


ಶಿಬಿರಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್.ಸ್ವಾಗತಿಸಿ,ಅಜಿತ್ ನಿಡುಬೆ ವಂದಿಸಿದರು.
ಪುತ್ತೂರು ವೆಲ್ ನೆಸ್ ಸೆಂಟರ್ ಮಾಲಕ ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ನಿರೂಪಿಸಿದರು.