















ಗುತ್ತಿಗಾರಿನ ಬ್ಲೆಸ್ಡ್ ಕುರಿಯ ಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗುಣನಿಧಿ ಎಂ ಎಂಬ ವಿದ್ಯಾರ್ಥಿಯು ಬೆಳ್ತಂಗಡಿ ತಾಲೂಕಿನ ಹಳೆಕೋಟೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ 17 ವರ್ಷದ ಒಳಗಿನ ವಯೋಮಾನದ ಬಾಲಕರ ಚೆಸ್ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ದಿನಾಂಕ 3.11.2025 ರಿಂದ 5. 11 .2025 ರ ವರೆಗೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ನಡೆಯುವ ರಾಜ್ಯ ಮಟ್ಟದ ಚೆಸ್. ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ಇವರು ಎಲಿಮಲೆ ಯ ಬಾಜಿನಡ್ಕದ ಸುಳ್ಯ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಉದ್ಯೋಗಿ ಹುಕ್ರಪ್ಪ ಎಂ ಮತ್ತು ಗುತ್ತಿಗಾರು ಪದವಿ ಪೂರ್ವ ಕಾಲೇಜಿನ ವಿಜ್ಞಾನ ಶಿಕ್ಷಕರಾದ ಶ್ರೀಮತಿ ಸಾವಿತ್ರಿ ಇವರ ಪುತ್ರ.










