















ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪ್ರಯೋಜಿತ ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಸದಸ್ಯರಿಂದ ಹಾಗೂ ಜ್ಞಾನದೀಪ ಶಿಕ್ಷಣ ತರಬೇತಿಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ ಬೆಳ್ಳಾರೆ ಸಾರ್ವಜನಿಕ ಗ್ರಂಥಲಾಯದ ಗ್ರಂಥಪಾಲಕಿ ಬೆಳ್ಳಾರೆ ಸಾರ್ವಜನಿಕ ಗ್ರಂಥಾಲಯ ಬಳಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು. ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಗಗನ್ ಎಂ ಎಸ್, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ವಿಶ್ವನಾಥ ಕೆ, ನಿಕಟಪೂರ್ವಾಧ್ಯಕ್ಷ ಚಂದ್ರಶೇಖರ ರೈ ಬಜನಿ, ಮುಸ್ತಫಾ ಬೆಳ್ಳಾರೆ, ಬೆಳ್ಳಾರೆ ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಬೆಳ್ಳಾರೆ ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕಿ ಶಶಿಕಲಾ, ಜ್ಞಾನದೀಪ ಸಂಸ್ಥೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











