ಇಂದು ಸಂಜೆ ಸಮಾರೋಪ
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ರೋಟರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಗಳು ಸುಳ್ಯ ಇವರ ಸಹಯೋಗದಲ್ಲಿ, ನವೆಂಬರ್ ೩ ರಂದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಬಾಲಕ ಬಾಲಕಿಯರ ವಿಭಾಗದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ರೋಟರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ಸಮಾರಂಭದ ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಮೇಜರ್ ಡೋನರ್, ಡಾ.ರಾಮ್ ಮೋಹನ್ ವಹಿಸಿದ್ದರು.
ಶಾಲಾ ಘೋಷ್ ತಂಡದೊಂದಿಗೆ ಅತಿಥಿಗಳನ್ನು ಬರಮಾಡಿ ಕೊಳ್ಳಲಾಯಿತು.
ರೋಟರಿ ವಿದ್ಯಾಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ರೋ.ಮೇಜರ್ ಡೋನರ್ ಪಿ.ಪಿ.ಹೆಚ್.ಎಫ್.ರಾಮಚಂದ್ರ. ಪಿ. ಶಾಲಾ ಕ್ರೀಡಾ ಧ್ವಜಾರೋಹಣ ಮಾಡಿದರು.
ದ.ಕ. ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿಯವರು ತಾಲೂಕು ಕ್ರೀಡಾ ಧ್ವಜಾರೋಹಣ ನೆರವೇರಿಸಿ, ದೀಪ ಬೆಳಗಿಸಿ, ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಕ್ರೀಡಾಪಟು ಸುಬ್ರಹ್ಮಣ್ಯ ಕೆ.ಎಮ್. ಕ್ರೀಡಾ ಜ್ಯೋತಿಯನ್ನು ಉದ್ಘಾಟಿಸಿ, ಕ್ರೀಡಾ ಸಾಧನೆಗೆ ಸತತ ಪ್ರಯತ್ನ ಮತ್ತು ಛಲ ಅವಶ್ಯಕ ಆಗ ಎಲ್ಲವನ್ನೂ ಸಾಧಿಸಬಹುದು ಎಂದು ಶುಭ ಹಾರೈಸಿದರು.















ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ಗೀತಾ ಪ್ರತಿಜ್ಞೆಯ ವಿಧಿಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೀತಲ್ .ಯು.ಕೆ. ಹಾಗೂ ಕ್ರೀಡಾಕೂಟದ ಗೌರವಾಧ್ಯಕ್ಷರೂ ರೋಟರಿ ವಿದ್ಯಾಸಂಸ್ಥೆಗಳ ಪೂರ್ವ ಸಂಚಾಲಕರೂ, ಪೂರ್ವಾಧ್ಯಕ್ಷರಾದ ರೋ.ಪಿ.ಪಿ.ಪಿ.ಹೆಚ್.ಎಫ್. ಸವಣೂರು ಸೀತಾರಾಮ ರೈ. ಯವರು ಶುಭ ಹಾರೈಸಿದರು .
,ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಳಾದ ಶ್ರೀ.ಸೂಫಿ ಪೆರಾಜೆ , ಆಡಳಿತ ಮಂಡಳಿಯ ಸದಸ್ಯರಾದ ರೋ. ಪಿ.ಪಿ. ಪಿ ಹೆಚ್.ಎಫ್. ಪುರುಷೋತ್ತಮ ಕೆ.ಜಿ. ರೋ.ಪಿ.ಹೆಚ್.ಎಫ್. ಹರಿರಾಯ ಕಾಮತ್, ನಿಯೋಜಿತ ಅಧ್ಯಕ್ಷರಾದ ರೋ. ಲತಾ ಮಧುಸೂದನ್, ಸುಳ್ಯ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಧನಂಜಯ ಮೇರ್ಕಜೆ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗ್ರೇಡ್ ೧ ಅಧ್ಯಕ್ಷರಾದ ಪದ್ಮನಾಭ ಎಡಮಂಗಲ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಮೂಡಿತ್ತಾಯ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಧರ ಗೌಡ , ಪ್ರಾಥಮಿಕ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ದೇವರಾಜ, ಟಿ.ಜಿ.ಟಿ. ಸಂಘದ ಅಧ್ಯಕ್ಷರಾದ ಸುನಿಲ್, ಪಿ.ಯು . ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಜ್ಯೋತ್ಸ್ನಾ , ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೋ.ಎಮ್.ಪಿ.ಹೆಚ್.ಎಫ್. ಪ್ರಭಾಕರನ್ ನಾಯರ್ ಸ್ವಾಗತಿಸಿ. ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಸೂಫಿ. ಪೆರಾಜೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕು.ವಂದಿತ, ಕು. ಪೂರ್ವಿಕ, ಕು. ಪ್ರಾರ್ಥನಾ, ಕು.ಆತ್ಮಿಕ, ಕು. ಆರಾಧ್ಯ ಪ್ರಾರ್ಥಿಸಿದರು.
ಕ್ರೀಡಾಕೂಟದ ಸಂಚಾಲಕರೂ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ರೊ.ವಸಂತ. ಎ.ಸಿ. ವಂದಿಸಿದರು.
ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ, ರಮ್ಯ ಅಡ್ಕಾರ್ ಹಾಗೂ ಸವಿತಾ ಜಿ.ಡಿ. ಕಾರ್ಯಕ್ರಮ ನಿರೂಪಿಸಿದರು.










