ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ ವತಿಯಿಂದ ಕೋಟಾ ಶ್ರೀನಿವಾಸ ಪೂಜಾರಿಗೆ ಮನವಿ

0

ಕರ್ನಾಟಕ ರಾಜ್ಯ ರಬ್ಬರ ಬೆಳೆಗಾರರ ಹಿತರ ಹಿತರಕ್ಷಣಾ ವೇದಿಕೆ ಉಜಿರೆ ವತಿಯಿಂದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ರಬ್ಬರ್ ಬೆಳೆಗಾರರ ಸಮಸ್ಯೆ ಕುರಿತು ನ.5 ರರಂದುಮನವಿ ಅರ್ಪಿಸಲಾಯಿತು.

ಈ ಸಂದರ್ಭ ಅರ್ಥಶಾಸ್ತ್ರಜ್ಞ
ಡಾ. ವಿಶ್ಲೇಶ್ವರ ವರ್ಮುಡಿ, ಕೇಂದ್ರೀಯ ರಬ್ಬರು ಮಂಡಳಿ ಸದಸ್ಯರಾದ ಮುಳಿಯ ಕೇಶವ ಭಟ್ ಗುತ್ತಿಗಾರು, ಸಂಯೋಜಕರಾದ
ಅನಂತ ಭಟ್ ಮಚ್ಚಿಮಲೆ. ಉಜಿರೆ ರಬ್ಬರ್ ಬೆಳೆಗಾರರ ಸಂಘದ ಸಿ.ಇ.ಒ. ವಿಜಯ
ರಾಜು ಶೆಟ್ಟಿ, ವಿಜಯ ಕೃಷ್ಣ ಪೆರಾಜೆ. ರಾಕೇಶ್ ಮೆಟ್ಟಿನಡ್ಕ ಮತ್ತಿತರರು ಉಪಸ್ಥಿತರಿದ್ದರು.

ಮನವಿಯಲ್ಲಿ ರಬ್ಬರ್ ಬೆಳೆಯನ್ನು ಕೃಷಿ ಎಂದು ಪರಿಗಣಿಸುವಂತೆ, ಬೆಳೆ ವಿಮೆ ದೊರಕುವಂತೆ, ಪ್ರೋತ್ಸಾಹ ಧನ ದೊರೆಯುವಂತೆ ಮತ್ತಿತರ ಬೇಡಿಕೆಗಳನ್ನು ಮನವಿಯಲ್ಲಿ ಮುಂದಿರಿಸಲಾಗಿದೆ.