ಕೊಡಗು ಗೌಡ ಹಿತರಕ್ಷಣಾ ಸಮಿತಿಯಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ

0

ಶಾಸಕ ಎ.ಎಸ್. ಪೊನ್ನಣ್ಣನವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ಕೊಡಲು ಮನವಿ

ಕೊಡಗು ಗೌಡ ಹಿತರಕ್ಷಣಾ ಸಮಿತಿ ವತಿಯಿಂದ ಕರ್ನಾಟಕ ಉಪಮುಖ್ಯಮಂತ್ರಿ ಡಿ .ಕೆ ಶಿವಕುಮಾರ್ ಸರ್ಕಾರ ಮತ್ತು ಅಧ್ಯಕ್ಷರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಭೇಟಿ ಮಾಡಿ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೊಡಗು ಜಿಲ್ಲೆಗೆ ಶಾಸಕರಾದ ಎ.ಎಸ್. ಪೊನ್ನಣ್ಣನವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ಕೊಡಬೇಕೆಂದು ಮನವಿ ಮಾಡಲಾಯಿತು .

ಈ ಸಂದರ್ಭದಲ್ಲಿ ಸಕರಾತ್ಮಕವಾಗಿ ಸ್ಪಂದಿಸಿ ಪೊನ್ನಣ್ಣ ನವರು ಉತ್ತಮ ಕೆಲಸಕಾರ್ಯಗಳನ್ನು ಮಾಡುತ್ತಿದ್ದು ಒಳ್ಳೆಯ ಹೆಸರು ಮಾಡುತ್ತಿರುವುದು ನನ್ನ ಗಮಕ್ಕೆ ಬಂದಿದೆ ಎಂದರು ಮುಂದಿನ ಸಚಿವ ಸಂಪುಟದಲ್ಲಿ ಅವರಿಗೆ ಉತ್ತಮ ಸ್ಥಾನ ನೀಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೊಡಗು ಸಂಪಾಜೆ ಕಾಂಗ್ರೆಸ್ ವಲಯ ಅಧ್ಯಕ್ಷ ಸುರೇಶ್ ಪಿ.ಎಲ್
ಪಟ್ಟದ ದೀಪಕ್ , ಪರ್ಮಲೆ ಗಣೇಶ, ದಂಬೆಕೋಡಿ ಬೀಷ್ಮ, ಸೂಚಾರಿರ ಪ್ರದೀಪ್ ಕುಮರ್, ಕಾಳಿರಮ್ಮನ ಕುಮಾರ್ , ವಿಜಯ ಕುಮಾರ್ ಕನ್ಯಾನ , ರಿತಿನ್ ಡೆಮ್ಮಲೆ ಸಂಪಾಜೆ ಮೊದಲಾದವರು ಉಪಸ್ಥಿತರಿದ್ದರು