ವಳಲಂಬೆ: ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

0

ಸಾಹಿತಿ, ಸಂಶೋಧಕ ಡಾ.ಪುರುಷೋತ್ತಮ ಕೆ.ವಿ.ರಿಂದ ದೀಪ ಪ್ರಜ್ವಲನೆ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ನ ಪಂಜ ಹೋಬಳಿ ಘಟಕದ ಆಶ್ರಯದಲ್ಲಿ ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ಹಿರಿಯ ಸಾಹಿತಿ, ಸಂಶೋಧಕರಾದ ಎ.ಕೆ.ಹಿಮಕರ ರವರ ಅಧ್ಯಕ್ಷತೆಯಲ್ಲಿ ಇಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದಲ್ಲಿ ನಡೆಯುತಿದ್ದು ಸಮ್ಮೇಳನವನ್ನು ಸಾಹಿತಿ, ಸಂಶೋಧಕರಾದ ಡಾ. ಪುರುಷೋತ್ತಮ ಕೆ ವಿ ಕರಂಗಲ್ಲು ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಕನ್ನಡ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ವೇದಿಕೆಯಲ್ಲಿ ಸುಳ್ಯ ಶಾಸಕಿ ಕು.ಭಾಗಿರಥಿ ಮುರುಳ್ಯ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ ಪಿ ಶ್ರೀನಾಥ್,
ಗುತ್ತಿಗಾರು ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಸುಮಿತ್ರ ಮೂಕಮಲೆ ಸುಳ್ಯ ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು, ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಿದ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಪಂಜ ಹೋಬಳಿ ಕಸಾಪ ಘಟಕ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಸುಳ್ಯ ಹೋಬಳಿ ಕಸಾಪ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ಕಸಾಪ ಜಿಲ್ಲಾ ಸಮಿತಿ ನಿರ್ದೇಶಕ ರಾಮಚಂದ್ರ ಪಲ್ಲತಡ್ಕ, ಸಮ್ಮೇಳಳದ ಸಂಘಟನಾ ಸಮಿತಿ ಕಾರ್ಯದರ್ಶಿ ಕೇಶವ ಹೊಸೋಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುತ್ತಿಗಾರು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತ ಗೀತೆ ಹಾಡಿದರು.