ಹಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ
ಸೋಣಂಗೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 15 ರಂದು ನಡೆದಿದ್ದು, ವಿವೇಕಾನಂದ ವಿದ್ಯಾ ಸಂಸ್ಥೆ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಕು.ಶಿವಾನಿ.ಪಿ.ವಿ ಅಭಿನಯ ಗೀತೆ ಪ್ರಥಮ ಸ್ಥಾನ, ಧಾರ್ಮಿಕ ಪಠಣ ದಲ್ಲಿ ಆಗ್ಮಸುಧೀರ್ ಕೆ ಪ್ರಥಮ ಸ್ಥಾನ,ಕಥೆ ಹೇಳುವುದು ದವನ್.ಪಿ ಎಸ್ ಪಡ್ದ೦ಬೈಲ್ ಪ್ರಥಮ ಸ್ಥಾನ, ಕನ್ನಡ ಕಂಠಪಾಠ ಚೈತನ್ಯ ಕೆ.ಸಿ ಪ್ರಥಮ ಸ್ಥಾನ, ಭಕ್ತಿಗೀತೆ ಆರಾಧ್ಯ ಪಿ.ಬಿ ದ್ವಿತೀಯ ಸ್ಥಾನ , ಕ್ಲೇ ಮಾಡಲಿಂಗ್ ಲಿತೇಶ್ ದ್ವಿತೀಯ ಸ್ಥಾನ, ಆಶುಭಾಷಣ ತಿಶಾನ್ ವಿಹಾರ್ ದ್ವಿತೀಯ ಸ್ಥಾನ, ಮಿಮಿಕ್ರಿ ರಿಷಿತ್ ಪಿ.ಡಿ ತೃತೀಯ ಸ್ಥಾನ ಪಡೆದು ಕೊಂಡು ಹಿರಿಯ ಪ್ರಾಥಮಿಕ ವಿಭಾಗದ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.















ಕಿರಿಯ ವಿಭಾಗದಲ್ಲಿ ಸುಶಾನ್ ಇಂಗ್ಲಿಷ್ ಕಂಠಪಾಠ ಮತ್ತು ಚಿತ್ರಕಲೆ ತೃತೀಯ ಸ್ಥಾನ, ಯಶಿಕ. ಕೆ ದೇಶಭಕ್ತಿ ಗೀತೆ ಮತ್ತು ಭಕ್ತಿ ಗೀತೆ ಪ್ರಥಮ ಸ್ಥಾನ, ವರುಣಿಕ ಕಥೆ ಹೇಳುವುದು ಪ್ರಥಮ ಸ್ಥಾನ, ಧಾರ್ಮಿಕ ಪಠಣ ವಿಸ್ಮಿತ ಎ. ದ್ವಿತೀಯ ಸ್ಥಾನ, ದುಶಾಂತ್ ಪಿ ಎಸ್, ಛದ್ಮವೇಷ ತೃತೀಯ ಸ್ಥಾನ, ಮಧುಕೃಷ್ಣ ಕ್ಲೇಮಾಡಲಿಂಗ್ ಪ್ರಥಮ ಸ್ಥಾನ ಪಡೆದು ಕೊಂಡು ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಪ್ರಶಸ್ತಿಯನ್ನು ವಿವೇಕಾನಂದ ಸಂಸ್ಥೆಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಯ ಜಯಪ್ರಸಾದ್ ಕಾರಿಂಜ, ಸಹ ಶಿಕ್ಷಕಿಯಾದ ಶ್ರೀಮತಿ ಪವಿತ್ರ ಕೆ, ಶ್ರೀಮತಿ ಲೀಲಾವತಿ, ಶ್ರೀಮತಿ ರಶ್ಮಿ, ಹಾಗೂ ಸ್ಪರ್ಧಾ ವಿದ್ಯಾರ್ಥಿಗಳು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ಸುಳ್ಯ ಇದರ ಸಿ ಆರ್ ಪಿ ಶ್ರೀಮತಿ ಅನುರಾದ, ಸೋಣ೦ಗೇರಿ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಚಿದಾನಂದ ರಾವ್, ಮುಖ್ಯ ಶಿಕ್ಷಕಿ ಶ್ರೀಮತಿ ಕುಸುಮಾವತಿ, ನಿವೃತ್ತ ಶಿಕ್ಷಕ ವೀರಪ್ಪ ಮಾಸ್ಟರ್ ಐವರ್ನಾಡು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯ ಅದ್ಯಾಪಕ ವೃಂದದವರು ತರಬೇತಿಗೊಳಿಸಿದ್ದರು.










