ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 194(4) ರ ಮೇರೆಗೆ ಸಭಾಪತಿಯವರು ವಿಧಾನಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರನ್ನು ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತಾರೆ.
ಸಮಿತಿಯ ಸದಸ್ಯರಾಗಿ ಭಾರತಿ ಶೆಟ್ಟಿ, ಎಸ್.ವಿ.ಸಂಕನೂರ, ನಿರಾಣಿ ಹಣಮಂತ್ ರುದ್ರಪ್ಪ, ಶರವಣ ಟಿ.ಎ., ಡಾ|ಚಂದ್ರಶೇಖರ ಬಸವರಾಜ ಪಾಟೀಲ, ಕೆ.ಎಸ್.ನವೀನ್, ತಿಪ್ಪಣ್ಣಪ್ಪ ಕಮಕನೂರ, ರಾಮೋಜಿಗೌಡ ಅವರನ್ನು ಇದೇ ಸಂದರ್ಭದಲ್ಲಿ ನೇಮಕ ಮಾಡಲಾಗಿದೆ.

























