
ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ನ. 21ರಂದು ಆಚರಿಸಲಾಯಿತು.
ಗಣ್ಯರು ಧ್ವಜಾರೋಹಣ ಮಾಡುವ ಮೂಲಕ ಕನ್ನಡ ಧ್ವಜಕ್ಕೆ ಗೌರವ ಸಲ್ಲಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಒಎಲ್ಇ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ಮಾತನಾಡಿ ವೈದ್ಯಕೀಯ ವಿದ್ಯಾಭ್ಯಾಸ ಮತ್ತು ಉದ್ಯೋಗದಲ್ಲಿ ಇಂಗ್ಲಿಷ್ ಅಧಿಕವಾಗಿದ್ದರೂ ವೈದ್ಯರು ರೋಗಿಗಳೊಂದಿಗೆ ಮಾತನಾಡುವಾಗ ಕನ್ನಡವೇ ನಿಜವಾದ ಸಂಪರ್ಕ ಸೇತುವೆ. ನಮ್ಮ ಭಾಷೆ ನಮ್ಮ ಹೆಮ್ಮೆ ಕನ್ನಡವನ್ನು ಉಳಿಸಿ ಬೆಳೆಸೋಣ ಎಂದರು.
















ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲು, ಸುಳ್ಯ ತಾಲೂಕು ಆಸ್ಪತ್ರೆಯ ಸ್ತ್ರೀ ರೋಗ ತಜ್ಞರು ಮತ್ತು ಸಾಹಿತಿಗಳಾದ ಡಾ ಶಾಲಿನಿ ವಿ.ಎಲ್, ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್ ಭಾಗವಹಿಸಿದ್ದರು.
ಈ ಸಂದರ್ಭ ವೇದಿಕೆಯಲ್ಲಿ ಎಒಎಲ್ಇ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ ಪ್ರಕಾಶ್ ರಾವ್,ಡಾ ಗೀತಾ ದೊಪ್ಪಾ, ಡಾ ವೀಣಾ ಎನ್, ಡಾ ನವ್ಯ, ಡಾ ಅಂಜಲಿ, ಡಾ ಅಪೂರ್ವ ದೊರೆ, ಡಾ ರವಿಶಂಕರ್, ಕೆವಿಜಿ ಸಹ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಡಾ ಪ್ರಮೋದ್ ಕೆ.ಜೆ, ಡಾ ಮನೀಶ್,ಚಂದ್ರಾವತಿ ಕೆ. ಎಸ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಒ.ಬಿ.ಜಿ ವಿಭಾಗದ ಪ್ರಾಧ್ಯಪಕರು ಡಾ ವೀಣಾ ಎನ್ ಸ್ವಾಗತಿಸಿದರು. ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಡಾ ನವ್ಯ ಹಾಗೂ ಸಹ ಪ್ರಾಧ್ಯಪಕರು ಡಾ ಅಂಜಲಿ ಅತಿಥಿಗಳ ಪರಿಚಯಿಸಿದರು. ತ್ರಿತೀಯ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಾದ ಖುಷಿ ಐ ಪಟೇಲ್ ಹಾಗೂ ಕೃಷ್ಣಲಾಲ್ ಜಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ವೈವಿಧ್ಯ ನಡೆಯಿತು.










