“​ಹಳದಿ ಝಲಕ್” : ಕೆವಿಜಿ ಐ.ಪಿ.ಎಸ್ ಆವರಣಕ್ಕೆ ರೋಮಾಂಚಕ ಮೆರುಗು ನೀಡಿದ ‘ಯೆಲ್ಲೋ ಡೇ’

0

ಪಾಠದ ಜೊತೆ ಆಟ,
ಆಟದ ಜೊತೆ ಕಲಿಕೆ, ಕಲಿಕೆಯ ಜೊತೆ ನಲಿವು
ಈ ವಿಷಯದ ಆಧಾರದ ಮೇಲೆ ಕೆ.ಜಿ ವಿಭಾಗದ ಪುಟಾಣಿಗಳಿಗೆ ಮಧುರವಾದ ” ಹಳದಿ ಮೆಲ್ಲೋ ಎಲ್ಲೋ ” ದಿನದ ಆಚರಣೆಯನ್ನು ಕೆ.ವಿ.ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆಚರಿಸಲಾಯಿತು. ಪೋಷಕರು ಹಳದಿ ಬಣ್ಣದ ವಿಧವಿಧವಾದ ಸಾಮಗ್ರಿಗಳನ್ನು ಒದಗಿಸಿದರು.

ಶಿಕ್ಷಕ ವೃಂದದವರು ಹಳದಿ ಬಣ್ಣದ ಸಾಮಾಗ್ರಿಗಳಿಂದ ಕೊಠಡಿಯನ್ನು ವರ್ಣಮಯವಾಗಿ ಅಲಂಕರಿಸಿದರು. ಶಾಲಾ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಕೆ.ವಿಯರ ವಿಶೇಷ ಪ್ರೋತ್ಸಾಹದಿಂದ ಈ ಆಚರಣೆಗೆ ಮತ್ತಷ್ಟು ಮೆರುಗು ಸಿಕ್ಕಿತು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ರವರು ವಿದ್ಯಾರ್ಥಿಗಳಿಗೆ ಹಳದಿ ಬಣ್ಣದ ಹಾಡನ್ನು ಹಾಡಿಸಿ ಸಂಭ್ರಮಿಸಿದರು. ಕಲಿಕೆಯ ಜೊತೆ ಮನೋರಂಜನೆಯು ಮುಖ್ಯ ಎನ್ನುವುದನ್ನು ಪುಟಾಣಿಗಳಿಗೆ ತಿಳಿಸಿದರು. ಉಪ ಪ್ರಾಂಶುಪಾಲೆ, ಶಿಲ್ಪಾ ಬಿದ್ದಪ್ಪ ಮಕ್ಕಳ ಈ ಹಳದಿ ಲೋಕವನ್ನು ಕಂಡು ಸಂತಸವನ್ನು ವ್ಯಕ್ತಪಡಿಸಿದರು.

ಪುಟಾಣಿಗಳಿಗೆ ಹಳದಿ ಬಣ್ಣದ ಚಾಕಲೇಟ್ ಹಂಚುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಶಿಕ್ಷಕರು, ಶಿಕ್ಷಕೇತರ ವೃಂದದವರು ಹಾಗೂ ಸಿಬ್ಬಂದಿಗಳು ಸಹಕರಿಸಿದರು.