ಕಲ್ಲುಗುಂಡಿ ದಂಡಕಜೆ ಪ್ರವೀಣ್ ಎಂಬವರ ತೋಟದಲ್ಲಿರುವ ಬಾವಿಗೆ ನಿನ್ನೆ ಡಿ.3 ರಂದು ಸಂಜೆ ವೇಳೆಯಲ್ಲಿ ಹೋರಿ ಮತ್ತು ಇನ್ನೊಂದು ಹೋರಿಗಳ ನಡುವೆ ಕಾದಟ ನಡೆದಿದ್ದು ಅದರ ಪರಿಣಾಮವಾಗಿ ಒಂದು ಹೋರಿ ಬಾವಿಗೆ ಬಿದ್ದಿದ್ದು ಅದನ್ನು ನೋಡಿದ ಮನೆಯ ಮಾಲಿಕ ಪ್ರವಿಣ್ ಸ್ಥಳೀಯರಿಗೆ ವಿಷಯ ತಿಳಿಸಿ ರಾತ್ರಿ ವೇಳೆಯಲ್ಲಿ ಅದನ್ನು ತೆಗೆಯಲು ಅಸಾಧ್ಯವಾದಕಾರಣ ಮರುದಿನ ಬೆಳಿಗ್ಗೆ ಮತ್ತೆ ಜನ ಸೇರಿಸಿ ಪ್ರವಿಣ್ ರವರ ಸಹೋದರ ಪ್ರಾನ್ಸಿಸ್ ಬಾವಿಗೆ ಇಳಿದು ಸ್ಥಳಿಯ ಸಾರ್ವಜನಿಕರ ಸಹಾಯದ ಮೂಲಕ ಹೋರಿಯನ್ನು ಮೇಲೆಕೆತ್ತಲಾಯಿತು.
ಅಗ್ನಿಶಾಮಕ ದಳದವರಿಗೂ ಕರೆ ಮಾಡಿದ್ದರು ಅದರೆ ಅಗ್ನಿಶಾಮಕ ವಾಹನ ಬರಲು ರಸ್ತೆಯ ಸಮಸ್ಯೆ ಇರುವುದರಿಂದ ಕೊನೆಗೆ ಊರವರು ಸೇರಿ ಹೋರಿಯನ್ನು ಮೇಲೆತ್ತಿ ಜೀವ ರಕ್ಷಿಸಿದರು.















ಕಾರ್ಯಾಚರಣೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್, ಸರ್ವ ಕ್ರೈಸ್ತ ಸಮುದಾಯದ ಅಧ್ಯಕ್ಷ ಸಂತೋಷ್ ಕ್ರಾಸ್ತ,ಚರ್ಚ್ ಉಪಾಧ್ಯಕ್ಷ ಲಿಗೋರಿ ಮೊಂತೊರೊ,ಶರತ್ ಕಲ್ಲುಗುಂಡಿ, ಊರಿನ ಸಾರ್ವಜನಿಕರು ಸಹಕರಿಸಿದರು.










