ಡಿ.28 ರಂದು ವಿಜೃಂಭಣೆಯ ಅಮೃತ ಪಥ ಆಚರಣೆ
ಪಂಜ ಸರಕಾರಿ ಪದವಿ ಪೂರ್ವ ಕಾಲೇಜು 1951 ರಲ್ಲಿ ಪ್ರಾರಂಭಗೊಂಡು ಈಗ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ಡಿ.28 ರಂದು ಅಮೃತ ಪಥ ಕಾರ್ಯಕ್ರಮ ವಿಜೃಂಭಣೆಯ ನಡೆಯಲಿದೆ.

ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಅಮೃತ ಪಥ ಸಮಿತಿ ಅಧ್ಯಕ್ಷ ಜಾಕೆ ಮಾಧವ ಗೌಡರ ಅಧ್ಯಕ್ಷತೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ಡಿ.4 ರಂದು ನಡೆಯಿತು.















ಶ್ರೀಮತಿ ಎನ್.ಎಸ್. ಮಹಾದೇವಿ ಏನಡ್ಕ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.

ಅಮೃತ ಪಥ ಸಮಿತಿ ಪ್ರಧಾನ ಕಾರ್ಯದರ್ಶಿ ಸವಿತಾರ ಮುಡೂರು, ಪ್ರಧಾನ ಸಂಚಾಲಕ ಚಿನ್ನಪ್ಪ ಸಂಕಡ್ಕ, ಕಾಲೇಜಿನ ಪ್ರಾಂಶುಪಾಲ ಚಿದಾನಂದ, ಮುಖ್ಯ ಶಿಕ್ಷಕ ದೇವಿಪ್ರಸಾದ್,ಸಮಿತಿ ಕಾರ್ಯದರ್ಶಿ ಗುರು ಪ್ರಸಾದ್ ತೋಟ , ಖಜಾಂಜಿ ಜಯರಾಮ ಕಂಬಳ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಚಿನ್ನಪ್ಪ ಕಾಣಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಾಚಣ್ಣ ಕೆರೆಮೂಲೆ ವೇದಿಕೆಗೆ ಆಹ್ವಾನಿಸಿದರು. ಜಾಕೆ ಮಾಧವ ಗೌಡ ಜಾಕೆ ಸ್ವಾಗತಿಸಿ ಸವಿತಾರ ಮುಡೂರು ವಂದಿಸಿದರು.
ಆರ್ಥಿಕ ಸಹಕಾರ ಘೋಷಣೆ
20 ಲಕ್ಷ ವೆಚ್ಚದಲ್ಲಿ ನಡೆಯಲಿರುವ ಕಾರ್ಯಕ್ರಮ ಮತ್ತು ಶಾಶ್ವತ ಯೋಜನೆಗೆ ಜಾಕೆ ಮಾಧವ ಗೌಡರು ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಣ ಪ್ರೇಮಿಗಳಿಂದ ಆರ್ಥಿಕ ನೆರವು ಕೋರಿದರು. ಹಲವು ಮಂದಿ ಸಭೆಯಲ್ಲಿಯೇ ವಿವಿಧ ಮೊತ್ತದ ಆರ್ಥಿಕ ನೆರವು ಘೋಷಿಸಿದರು.










