ಸುಳ್ಯ ಬಂಟರ ಸಂಘದ ಅಧ್ಯಕ್ಷರಾಗಿ ತೋಟ ಸುಭಾಶ್ಚಂದ್ರ ರೈ

0

ಪ್ರಧಾನ ಕಾರ್ಯದರ್ಶಿ : ಗಂಗಾಧರ್ ರೈ , ಕೋಶಾಧಿಕಾರಿ : ಸುನಂದ ಶೆಟ್ಟಿ ಆಯ್ಕೆ

ಸುಳ್ಯ ಬಂಟರ ಯಾನೆ ನಾಡವರ ಸಂಘದ 2026-28 ನೇ ಸಾಲಿನ ಅಧ್ಯಕ್ಷರಾಗಿ ನಿವೃತ್ತ ಅಧ್ಯಾಪಕ ತೋಟ ಸುಭಾಶ್ಚಂದ್ರ ರೈ, ಪ್ರಧಾನ ಕಾರ್ಯದರ್ಶಿಯಾಗಿ ಕೃಷಿಕ ಗಂಗಾಧರ್ ರೈ ಸೋಣಂಗೇರಿ ಹಾಗೂ ಕೋಶಾಧಿಕಾರಿಯಾಗಿ ಶಿಕ್ಷಕಿ ಶ್ರೀಮತಿ ಸುನಂದ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 2ರಂದು ಬಂಟರ ಸಭಾಭವನದಲ್ಲಿ ನಡೆದ ಬಂಟರ ಸಂಘದ ನಿರ್ದೇಶಕರ ಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರ ಅಧ್ಯಕ್ಷತೆಯಲ್ಲಿ ಸಭೆ‌ ನಡೆಯಿತು. ಸಭೆಯಲ್ಲಿ ಬಂಟರ ಸಂಘಕ್ಕೆ‌ ನೂತನ ಪದಾಧಿಕಾರಿಗಳ ಆಯ್ಕೆಯ ವಿಚಾರವನ್ನು ಜಯಪ್ರಕಾಶ್ ರೈ ಗಳು‌ ಮುಂದಿಟ್ಟಾಗ ಮುಂದಿನ ಮೂರು‌ ವರ್ಷದ ಅವಧಿಗೆ ನೀವೇ ಮುಂದುವರಿಯುವಂತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಈ ವೇಳೆ ಹೊಸ ಪದಾಧಿಕಾರಿಗಳ ಆಯ್ಕೆ‌ ಕುರಿತು ಜಯಪ್ರಕಾಶ್ ರೈಗಳು ವಿವರ ನೀಡಿ, ತಾನು‌ ಜತೆಗಿರುವುದಾಗಿ ಹೇಳಿದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ಗೌರವಾಧ್ಯಕ್ಷರಾಗಿ ಎನ್.ಜಯಪ್ರಕಾಶ್ ರೈಗಳು ಆಯ್ಕೆಯಾದರು.

2026 ಜನವರಿ 1 ರಿಂದ ನೂತನ ತಂಡ ಜವಾಬ್ದಾರಿ ವಹಿಸಿಕೊಳ್ಳಲಿದೆ.