
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳಿಗೆ ಪ್ರತಿಷ್ಠಿತ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯಿಂದ ಕೊಡಲ್ಪಡುವ ಕಲಾ ರತ್ನ ಪ್ರಶಸ್ತಿಗೆ ಗೂನಡ್ಕ ನಿವಾಸಿ ಬೀಜದಕಟ್ಟೆಯ ಸಮೃದ್ಧಿ ಎಸ್ ಭಾಜನರಾಗಿದ್ದಾರೆ .















ಸುಮಾರು 25 ಹಿರಿಯ ಕಿರಿಯ ಸಾಧಕರಿಗೆ ಈ ಪ್ರಶಸ್ತಿಯನ್ನು ಮಂಗಳೂರಿನ ಟ್ರೀನಿಟಿ ಬಿಲ್ಡಿಂಗ್ ನಲ್ಲಿರುವ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯಲ್ಲಿ ಡಿಸೆಂಬರ್ 5 ರಂದು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

ಫ್ಯಾಷನ್ ಕ್ಷೇತ್ರ, ನೃತ್ಯ ,ಅಭಿನಯ ಕಲಿಕೆ ಎಲ್ಲಾ ಕ್ಷೇತ್ರಗಳಲ್ಲೂ ಈಕೆ ವಿವಿಧ ಸಾಧನೆ ಮಾಡಿರುತ್ತಾರೆ.
ನಗರ ಪಂಚಾಯತ್ ಉದ್ಯೋಗಿ ಶ್ರೀಮತಿ ಆಶಾ ಬಿ.ಆರ್ ಮತ್ತು ಎಸ್. ಡಿ .ಎಮ್ ಉದ್ಯೋಗಿ ಸದಾನಂದ ದಂಪತಿಗಳ ಪುತ್ರಿಯಾಗಿರುವ ಈಕೆ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕ ಇಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.











