ಅಜ್ಜಾವರ ಮೇನಾಲ ಮಖಾಂ ಉರೂಸ್ ಗೆ ಚಾಲನೆ

0

ಜೂ.20 ಉರೂಸ್ ಸಮಾರೋಪ ಹಾಗೂ ಸೌಹಾರ್ದ ಸಂಗಮ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಅಗಮನ


ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಹಾಗೂ 5 ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ಅಜ್ಜಾವರ ಮೇನಾಲ ಮಖಾಂ ವಠಾರದಲ್ಲಿ‌ ನಡೆಯುತ್ತಿದೆ
ಜೂ.16 ರಂದು ಉರೂಸ್ ಸಮಾರಂಭವನ್ನು ಸಯ್ಯದ್ ಅಹಮ್ಮದ್ ಪುಕೋಯ ತಂಙಳ್ ಪುತ್ತೂರು ಉದ್ಘಾಟಿಸಿದರು.
ಜೂ.17 ರಂದು ಅಜ್ಜಾವರ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್‌ ಖಾದರ್ ಮುನವ್ವರಿ ಧಾರ್ಮಿಕ ಪ್ರಬಾಷಣ ಮಾಡಿದರು.
ಜೂ.18ರಂದು ಮಖಾಂ ಅಲಂಕಾರ ಮತ್ತು ಝಿಕ್ರ್ ಹಲ್ಕ ಕಾರ್ಯಕ್ರಮ ನಡೆಯಿತು.
ಅಬ್ದುಲ್‌ ಸಲೀಂ ವಾಫಿ ಮಟನ್ನೂರ್ ಮುಖ್ಯ ಪ್ರಭಾಷಣ ಮಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಯತ್ ಕಮಿಟಿ ಅಧ್ಯಕ್ಷ ಅಬ್ದುಲ್‌ ಖಾದರ್ ಹಾಜಿ ಎ ವಹಿಸಿದ್ದರು.
ಸಮಿತಿ ಉಪಾಧ್ಯಕ್ಷ ಅಂದ ಹಾಜಿ ಪ್ರಗತಿ,ಸಮಿತಿ ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ,ಕೋಶಾಧಿಕಾರಿ ಶರೀಫ್ ರಿಲಾಕ್ಸ್,ಸಮಿತಿ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕುಂಞಿ ಪಳ್ಳಿಕರೆ, ಮೇನಾಲ ಮಸೀದಿ ಇಮಾಂ ಮಹಮ್ಮದ್ ಹನೀಫ್ ಮೌಲವಿ,ಮುಅಲ್ಲಿಂಗಳಾದ ಅಬ್ಬಾಸ್ ಅನ್ಸಾರಿ,ಮುಹ್ಯದ್ದೀನ್ ಅನ್ಸಾರಿ,ನೌಶಾದ್ ಯಮಾನಿ,ಮೊದಲಾದವರು ಉಪಸ್ಥಿತರಿದ್ದರು.

ಜೂ.19 ರಂದು ಹನೀಫ್ ನಿಝಾಮಿ ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ.
ಜೂ.20 ಉರೂಸ್ ಸಮಾರೋಪ ಹಾಗೂ ಸೌಹಾರ್ದ ಸಮಾರಂಭ ಕಾರ್ಯಕ್ರಮ ನಡೆಯಲಿದೆ.
ಸೌಹಾರ್ದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಭಾಪತಿ ಯು ಟಿ ಖಾದರ್ ಬಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳ ಮೊಕ್ತೆಸರಾದ ಎಂ ಗುಡ್ಡಪ್ಪ ರೈ ಅಧ್ಯಕ್ಷತೆ ವಹಿಸಲಿದ್ದಾರೆ.


ಬೆಳ್ಳಾರೆ ಪ್ರಥಮ ದರ್ಜೆ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಚಂದ್ರಶೇಖರ ಕಾಂತಮಂಗಲ,ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕುಂಬ್ರ ಇದರ ಪ್ರಾಂಶುಪಾಲರಾದ ಅನೀಸ್ ಕೌಶರಿ ಸೌಹಾರ್ದ ಸಮಾರಂಭದಲ್ಲಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಸಯ್ಯದ್ ಝೈನುಲ್ ಅಬಿದಿನ್ ತಂಙಳ್ ದುಗಲಡ್ಕ ದುವಾಶಿರ್ವಚನ ನೀಡಲಿದ್ದಾರೆ.
ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಪ್ರಬಾಷಣ ಮಾಡಲಿದ್ದಾರೆ ಸಮಾರೋಪ ಸಮಾರಂಭದ ಕೊನೆಯ ಅನ್ನದಾನ ವಿತರಣೆ ನಡೆಯಲಿದೆ ಎಂದು ಅಜ್ಜಾವರ ಮೇನಾಲ ಜಮಾಯತ್ ಕಮಿಟಿಯವರು ತಿಳಿಸಿದ್ದಾರೆ.