ಸುಳ್ಯ ನ್ಯಾಯಾಲಯದಲ್ಲಿ ಯೋಗ ದಿನಾಚರಣೆ

0

ಸುಳ್ಯ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಇದರ ಆಶ್ರಯದಲ್ಲಿ ಯೋಗ ದಿನಾಚರಣೆ ಜೂ.21 ರಂದು‌ ಮುಂಜಾನೆ 7 ರಿಂದ ನಡೆಯಿತು.

ಸುಳ್ಯ ಆಯುರ್ದಾಮ ಆಸ್ಪತ್ರೆಯಲ್ಲಿ ಯೋಗ ಮತ್ತು ನ್ಯಾಚ್ಯುರಾಪತಿ ವೈದ್ಯರಾಗಿರುವ ಡಾ. ಸಾತ್ವಿಕ ಅಡ್ಕಬಳೆ ಯೋಗ ತರಬೇತಿ ನೀಡಿದರು.

ಸೀನಿಯಲ್ ಸಿವಿಲ್ ನ್ಯಾಯಾದೀಶ ರಾದ ಮೋಹನ್ ಬಾಬು, ಸಿವಿಲ್ ನ್ಯಾಯಾದೀಶರಾದ ಕು.ಅರ್ಪಿತಾ, ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ, ಕೋಶಾಧಿಕಾರಿ ಜಗದೀಶ್, ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕೋಡ್ತುಗುಳಿ, ಭಾಸ್ಕರ್ ರಾವ್, ನ್ಯಾಯಾಲಯದ ಸಿಬ್ಬಂದಿಗಳು, ಪೋಲೀಸ್ ಸಿಬ್ಬಂದಿಗಳು ಇದ್ದರು.

ಸೀನಿಯರ್ ವಿಭಾಗದ ಶಿರಸ್ತೆದಾರ್ ಗಿರೀಶ್ ಸ್ವಾಗತಿಸಿದರು.