ಸಂಪಾಜೆ ಪದವಿ ಪೂರ್ವ ಕಾಲೇಜು : ವಿದ್ಯಾರ್ಥಿ ಸರಕಾರ ರಚನೆ

0

ಸಂಪಾಜೆ ಪದವಿ ಪೂರ್ವ ಕಾಲೇಜು 2023-24 ನೇ ಸಾಲಿನ ವಿದ್ಯಾರ್ಥಿ ಸರಕಾರದ ರಚನೆಯಾಗಿದ್ದು, ಆಯ್ಕೆಯನ್ನು ಮಾದರಿ ಮತದಾನ ಪ್ರಕ್ರಿಯೆಯ ಮೂಲಕ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ವಿದ್ಯಾರ್ಥಿ ಸರಕಾರದ ನಾಯಕನಾಗಿ ಧನಿತ್ ಬಿ. ಎಸ್.ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ,ಉಪನಾಯಕ ಸುಹೈಬ್ . ಎಂ.ಹತ್ತನೇ ತರಗತಿ, ಕಾರ್ಯದರ್ಶಿಯಾಗಿ ಚಸ್ಮಿತಾ.ಕೆ.ಆರ್. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ಹಾಗೂ ಜತೆ ಕಾರ್ಯದರ್ಶಿಯಾಗಿ ಶ್ರಾವ್ಯ.ಕೆ. ಜಿ ಹತ್ತನೇ ತರಗತಿ ಇವರುಗಳು ಚುನಾಯಿತರಾದರು. ನಂತರ ವಿದ್ಯಾರ್ಥಿ ಸರಕಾರದ ವಿವಿಧ ಮಂತ್ರಿಗಳ ಆಯ್ಕೆಯೂ ನಡೆಯಿತು. ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು.