ಆಲೆಟ್ಟಿ: ಅಟೋ ಚಾಲಕ ವಿಜಯ ನೆಡ್ಚಿಲು ನಿಧನ

0

ಆಲೆಟ್ಟಿ ಗ್ರಾಮದ ನೆಡ್ಚಿಲು ‌ನಿವಾಸಿ ದಿ.ಗೋಪಾಲ ನಾಯ್ಕ ರವರ ಪುತ್ರ ಅಟೋ ಚಾಲಕ ವಿಜಯ ನೆಡ್ಚಿಲು ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ.11 ರಂದು ರಾತ್ರಿ ನೆಡ್ಚಿಲು ಮನೆಯಲ್ಲಿ ನಿಧನರಾದರು. ಅವರಿಗೆ 37 ವರ್ಷ ವಯಸ್ಸಾಗಿತ್ತು.

ಮೃತರು ಅವಿವಾಹಿತ ರಾಗಿದ್ದು ಲಿವರ್ ಸಮಸ್ಯೆ ಯಿಂದಾಗಿಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


ಮೃತರುತಾಯಿ ಶ್ರೀಮತಿ ಕಸ್ತೂರಿ, ಸಹೋದರ ರಾಮಚಂದ್ರ ಮತ್ತು ರವಿಚಂದ್ರ ನೆಡ್ಚಿಲು, ಸಹೋದರಿಯರಾದ ಸವಿತ ಮತ್ತು ಪುಷ್ಪಾವತಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.


ಮೃತರು ಕಳೆದ 10 ವರ್ಷಗಳಿಂದ ‌ಸುಳ್ಯದಲ್ಲಿ ಅಟೋ ಚಾಲಕರಾಗಿದ್ದರು.