ಜು.31ರಂದು‌ ಮುಳ್ಯ-ಅಟ್ಲೂರು ಶಾಲೆಗೆ ದಾನಿಗಳು ನೀಡಿದ ಕೊಠಡಿ ಉದ್ಘಾಟನೆ – ಲ್ಯಾಪ್ ಟಾಪ್ ಸ್ವೀಕಾರ

0

ನಿವೃತ್ತರಾಗಲಿರುವ ಶಾಲಾ ಮುಖ್ಯ ಶಿಕ್ಷಕ ಶಿವರಾಮ ಕೇನಾಜೆಯವರಿಗೆ ಬೀಳ್ಕೊಡುಗೆ

ಅಜ್ಜಾವರ ಗ್ರಾಮದ ಮುಳ್ಯ – ಅಟ್ಲೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಾದ ರವಿಪ್ರಕಾಶ್ ಅಟ್ಲೂರು‌ ಹಾಗೂ ಶ್ರೀಮತಿ ಪದ್ಮಲತಾ ಅಟ್ಲೂರು ಇವರು 16 ಲಕ್ಷ ರೂ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಎರಡು ಕೊಠಡಿಗಳ ಉದ್ಘಾಟನೆ – ಪ್ರಣವ ಫೌಂಡೇಶನ್ ಬೆಂಗಳೂರು ಇವರು ನೀಡುವ ಲ್ಯಾಪ್ ಟಾಪ್ ಗಳ ಸ್ವೀಕಾರ, ಜು.31ರಂದು ನಿವೃತ್ತರಾಗಲಿರುವ ಶಾಲಾ ಮುಖ್ಯ ಶಿಕ್ಷಕ ಶಿವರಾಮ ಕೇನಾಜೆಯವರಿಗೆ ಬೀಳ್ಕೊಡುಗೆ ಸಮಾರಂಭ ಜು.31 ರಂದು‌ ನಡೆಯಲಿದೆ. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ‌ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ಅಚ್ಯುತ ಅಟ್ಲೂರು ಹಾಗೂ ಅಧ್ಯಕ್ಷ ಕಿರಣ್ ಅಟ್ಲೂರು ತಿಳಿಸಿದ್ದಾರೆ.

ಜು.28 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ‌ನಡೆಸಿ‌ ಕಾರ್ಯಕ್ರಮದ ವಿವರ ನೀಡಿದರು.

ನಿವೃತ್ತ ಶಿಕ್ಷಕಿ ಕಲಾವತಿ ವೆಂಕಟಕೃಷ್ಣಯ್ಯನವರ ‌ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಾಸಕಿ ಭಾಗೀರಥಿ ಮುರುಳ್ಯ ನೂತನ ಕೊಠಡಿ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಡಿಡಿಪಿಐ ಡಿ.ಆರ್. ನಾಯ್ಕ್, ಬಿಇಒ ಬಿ.ಈ.ರಮೇಶ್, ಸುಳ್ಯ ‌ಎಸ್.ಐ. ಡಿ.ಎನ್. ಈರಯ್ಯ, ಯೋಜನಾಧಿಕಾರಿ ನಾಗೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿತೇಂದ್ರ ಕುಂದೇಶ್ವರ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ದೇವಿಪ್ರಸಾದ್ ಅತ್ಯಾಡಿ, ದಾನಿ ರವಿಪ್ರಕಾಶ್ ಅಟ್ಲೂರು ಸಹಿತ ಹಲವು ಗಣ್ಯರು‌ ಭಾಗವಹಿಸಲಿದ್ದಾರೆ ಎಂದು‌ ವಿವರ ನೀಡಿದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮುಳ್ಯ ಅಟ್ಲೂರು, ಮಹಾಗಣಪತಿ ಭಜನಾ ಮಂದಿರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಧ್ಯಾಪಕ ವೃಂದ, ಪೋಷಕರು, ಮತ್ತು ವಿದ್ಯಾರ್ಥಿಗಳು ಇವರ ಸಹಕಾರದಲ್ಲಿ ಕಾರ್ಯಕ್ರಮ ನಡೆಯುವುದು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಎಂ.ಸಿ.‌ ಅಧ್ಯಕ್ಷ ದೇವಿಪ್ರಸಾದ್ ಅತ್ಯಾಡಿ, ಮಾಜಿ ಅಧ್ಯಕ್ಷ ‌ನಾಗರಾಜ್ ಮುಳ್ಯ, ವಿಶ್ವನಾಥ್ ಕುರುಂಜಿ ಇದ್ದರು.