ಜ್ಞಾನಮಂದಾರ ಕರ್ನಾಟಕ ಜ್ಯೋತಿ ರಾಜ್ಯ ಪುರಸ್ಕಾರಕ್ಕೆ ಉಮೇಶ್ ಮಣಿಕ್ಕಾರ ಆಯ್ಕೆ

0

ಬೆಂಗಳೂರಿನ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ತನ್ನ 25ನೇ ವರ್ಷದ ರಜತ ಮಹೋತ್ಸವ ಅಂಗವಾಗಿ ವಿವಿಧ ಕ್ಷೇತ್ರದ ಗಣ್ಯರಿಗೆ ನೀಡುವ ರಾಜ್ಯ ಮಟ್ಟದ ಕರ್ನಾಟಕ ಜ್ಯೋತಿ ಪುರಸ್ಕಾರಕ್ಕೆ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಜ್ಞಾನವಿಕಾಸ ಶಾಲಾ ಸಭಾಭವನದಲ್ಲಿ ಡಿ.21ರಂದು ನಡೆಯಲಿದೆ. ಕರ್ನಾಟಕ ಜ್ಯೋತಿ ರಾಜ್ಯ ಪುರಸ್ಕಾರಕ್ಕೆ ರಾಜ್ಯದ 9 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.