ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷರಾಗಿ ವಿಜಯ ಕುಮಾರ್ ಅಂಙಣ, ಉಪಾಧ್ಯಕ್ಷರಾಗಿ ಜಯಂತ ಬಾಳುಗೋಡು ಅವಿರೋಧ ಆಯ್ಕೆ

0

ಹಾಲಿ ಅಧ್ಯಕ್ಷ ಉಪಾಧ್ಯಕ್ಷರಾಗಿ, ಹಾಲಿ ಉಪಾಧ್ಯಕ್ಷ ಮುಂದಿನ ಅಧ್ಯಕ್ಷರಾಗಿ ಆಯ್ಕೆ

ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಹೊಸ ಆಯ್ಕೆ ನಡೆಯಿತು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನ ಸಾಮಾನ್ಯ ವರ್ಗಕ್ಕೆಇದ್ದು ಅಧ್ಯಕ್ಷರಾಗಿ ಹಾಲಿ ಉಪಾಧ್ಯಕ್ಷ ವಿಜಯ ಕುಮಾರ್ ಅಂಙಣ, ಉಪಾಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಜಯಂತ ಬಾಳುಗೋಡು ನಾಮಪತ್ರ ಸಲ್ಲಿಸಿದ್ದು ಬೇರೆ ಯಾವುದೇ ನಾಮಪತ್ರ ಇಲ್ಕದೇ ಇದ್ದ ಕಾರಣ ಇವರುಗಳು ಅವಿರೋಧವಾಗಿ ಆಯ್ಕೆಯಾದರು. ವಿಜಯ್ ಅಂಙಣ ಅವರನ್ನು ಗ್ರಾ.ಪಂ ಸದ್ಯಸ್ಯೆ ಬಿಂಧು ಪಿ ಸೂಚಿಸಿದರು. ಜಯಂತ್ ಅವರನ್ನು ಗ್ರಾ.ಪಂ ಸದಸ್ಯೆ ಪದ್ಮಾವತಿ ಕಲ್ಲೇಮಠ ಸೂಚಿಸಿದರು‌. ಗ್ರಾ.ಪಂ ಸದಸ್ಯರುಗಳಾದ ಶಿಲ್ಪಾ ಕೊತ್ನಡ್ಕ, ದಿವಾಕರ ಮುಂಡಾಜೆ ಉಪಸ್ಥಿತರಿದ್ದರು.

ಇಲ್ಲಿ ಒಟ್ಟಾಗಿ 5 ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದು ಒರ್ವರು ಜೆಡಿಎಸ್ ಬೆಂಬಲಿತರಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್. ಹಾಗು ಸಹಾಯಕ ಚುನಾವಣಾ ಅಧಿಕಾರಿಯಾಗಿ ಪಿಡಿಒ ಮಣಿಯಾನ ಪುರುಷೋತ್ತಮ ಅವರಿದ್ದರು. ಆಯ್ಕೆ ಪ್ರಕ್ರಿಯೆ ಬಳಿಕ ಹಿಮ್ಮತ್ ಕೆ.ಸಿ, ಕುಮಾರ ಕುಕ್ಕುಂದ್ರಡ್ಕ, ದಿನೇಶ್ ಹರಿಹರ, ರವಿಚಂದ್ರ ಗೊಳ್ಯಾಡಿ, ಪುರುಷೋತ್ತಮ ಕೊತ್ನಡ್ಕ ಮತ್ತಿತರರು ಅಭಿನಂದಿಸಿರು. ಗ್ರಾ.ಪಂ ಸಿಬ್ಬಂದಿಗಳಾದ ಇಂದಿರಾಂಭ, ಪ್ರಿಯ, ಜಯಕುಮಾರ್, ಚಂದ್ರಿಕಾ ಉಪಸ್ಥಿತರಿದ್ದರು.