ವಿಮೆ ಕಂಪನಿ ಕಡಿಮೆ ಪಾವತಿಸಿದೆಯೋ ಅಥವಾ ಸರಕಾರಗಳು ತಮ್ಮ ಪಾಲನ್ನು ನೀಡಿಲ್ಲವೋ ? : ಗ್ರಾ.ಪಂ. ಸದಸ್ಯ ಬಾಲಚಂದ್ರ ದೇವರಗುಂಡ ಪ್ರಶ್ನೆ
ಹವಾಮಾನ ಆಧಾರಿತ ಬೆಳೆ ವಿಮೆಯ ಹಣ ಕೃಷಿಕರ ಖಾತೆಗೆ ಜಮೆಯಾಗಿದ್ದು, ವಿಮೆ ಕಂಪೆನಿಗೆ ಹಣ ಸಲ್ಲಿಕೆಯಾದ ಅರ್ಧದಷ್ಟು ಮಾತ್ರ ಈ ಬಾರಿ ಕೃಷಿಕರ ಖಾತೆಗೆ ಜಮೆಯಾಗಿದೆ ಎಂದು ಕೃಷಿಕರು ಹೇಳುತಿದ್ದಾರೆ. ವಿಮೆಯ ಹಣ ಕಡಿಮೆ ಪಾವತಿಯಾಗಿರುವುದಕ್ಕೆ ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.















ಮಂಡೆಕೋಲು ಗ್ರಾ.ಪಂ.ಸದಸ್ಯ, ಕೃಷಿಕರೂ ಆಗಿರುವ ಬಾಲಚಂದ್ರ ದೇವರಗುಂಡರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
2024-25ರಲ್ಲಿ ಕೃಷಿಕರಾದ ನಾವು ಹವಾಮಾನ ಆಧಾರಿತ ಬೆಳೆ ವಿಮೆಯು 1 ಎಕ್ರೆ ಅಡಿಕೆ ತೋಟಕ್ಕೆ ರೂ.2590.08 ಪಾವತಿಸಿದ್ದೇವೆ. ಕೇಂದ್ರ ಸರಕಾರ ರೂ. 5180. 15 ಪಾವತಿಸಬೇಕು. ಹಾಗೂ ರಾಜ್ಯ ಸರಕಾರ ರೂ. 10360.56 ಸೇರಿ ವಿಮಾ ಕಂಪೆನಿಗೆ ಒಟ್ಟು 1 ಎಕರೆಗೆ ರೂ. 18130.56 ಪಾವತಿಯಾಗುತ್ತದೆ. ಇಷ್ಟು ಪಡೆದ ಕಂಪೆನಿ ಈ ಬಾರಿ ನಮ್ಮಲ್ಲಿ 1 ಎಕರೆಗೆ 9200 ರಷ್ಟು ಮಾತ್ರ ವಿಮೆ ಪರಿಹಾರ ಮೊತ್ತವಾಗಿ ನೀಡಿದೆ. ಕಂಪೆನಿಗೆ 18130 ರಷ್ಟು ಸಲ್ಲಿಕೆಯಾದರೂ ಕಂಪೆನಿಯವರು ಕೃಷಿಕರಿಗೆ ಅರ್ಧದಷ್ಟು ನೀಡಿದ್ದಾರೆಂದರೆ ಇದು ಹೇಗೆ ಎಂಬ ಉತ್ತರ ಕೃಷಿನಿಗೆ ಬೇಕಾಗಿದೆ. ಯಾವ ರೀತಿ ನೀಡಿದ್ದಾರೆ ? ಅಥವಾ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ತಮ್ಮ ಪಾಲನ್ನು ವಿಮಾ ಕಂಪನಿಗೆ ಪಾವತಿಸಿಲ್ಲವೇ ?. ಸರಕಾರಗಳು ಪಾವತಿಸಿದ್ದರೆ ಕಂಪೆನಿಗಳು ಇಷ್ಟು ಕಡಿಮೆ ಹಣ ಕೃಷಿಕನಿಗೆ ನೀಡಿರುವುದನ್ನು ವಿಮಾ ಕಂಪನಿಯನ್ನು ಜನಪ್ರತಿನಿಧಿಗಳು ಪ್ರಶ್ನಿಸಿ, ಕೃಷಿನಿಗೆ ನಿಜವಾಗಿ ಸಿಗಬೇಕಾದ ಮೊತ್ತ ಸಿಗುವಂತೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.



