ಮರ್ಕಂಜ : ಅಧ್ಯಕ್ಷತೆಗೆ ಒಂದು‌ ಮತ್ತು ಉಪಾಧ್ಯಕ್ಷತೆಗೆ ಮೂರು ನಾಮಪತ್ರ ಸಲ್ಲಿಕೆ

0

ಮರ್ಕಂಜ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಇಂದು‌ ನಡೆಯಲಿದ್ದು, ಅಧ್ಯಕ್ಷತೆಗೆ ಮೀಸಲಾದ ಪ.ಪಂಗಡ ಕ್ಷೇತ್ರದಿಂದ ಗೀತಾ ಹೊಸೊಳಿಕೆಯವರು ನಾಮಪತ್ರ ಸಲ್ಲಿಸಿದ್ದಾರೆ. ಉಪಾಧ್ಯಕ್ಷ ತೆಗೆ ಮೂರು ನಾಮಪತ್ರ ಸಲ್ಲಿಕೆಯಾಗಿದೆ‌. ಉಪಾಧ್ಯಕ್ಷತೆಗೆ ಸಂಧ್ಯಾ ಸೇವಾಜೆ, ರಮತ ಕುದ್ಕುಳಿ, ನಾಗವೇಣಿ ಶೆಟ್ಟಿ‌ಮಜಲು‌ ನಾಮಪತ್ರ ಸಲ್ಲಿಸಿದ್ದಾರೆ. ಮಧ್ಯಾಹ್ನ 1 ಗಂಟೆಯ ನಂತರ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ ಮತ್ತು ಚುನಾವಣಾ ಪ್ರಕ್ರಿಯೆಗಳು ನಡೆಯಲಿದೆ.