ಕಲ್ಮಡ್ಕ: ತೀವ್ರವಾಗಿ ಹದೆಗೆಟ್ಟ ರಸ್ತೆಗೆ ಜೀವ ಕಳೆ ತುಂಬಿದ ಉತ್ಸಾಹಿ ಯುವಕರು

0

ಕಲ್ಮಡ್ಕ ಗ್ರಾಮದ ಜೋಗಿಬೆಟ್ಟು – ಮಂಞನಕಾನ ರಸ್ತೆಯು ನಡೆದುಕೊಂಡು ಹೋಗಲಾರದಷ್ಟು ಹದೆಗಟ್ಟಿದೆ. ಈ ರಸ್ತೆಯಲ್ಲಿ ನಿತ್ಯವೂ ನೂರಾರು ಜನರು ಶಾಲಾ ಮಕ್ಕಳು ನಡೆದಾಡಲು ಪರದಾಟ ಪಡುತ್ತಿದ್ದರು.


ಈ ರಸ್ತೆಯು ಮಳೆಗಾಲದಲ್ಲಿ ಪ್ರತಿ ವರ್ಷವೂ ಹದೆಗೆಡುವುದನ್ನು ರೂಢಿಯಾಗಿಸಿ ಕೊಂಡಿದೆ…!! ಹಾಗೆನೆ ಈ ವರ್ಷವೂ ಪುನರಾವರ್ತನೆಯಾಗಿದೆ. ವರ್ಷವೂ ಇಲ್ಲಿನ ಜನರೆ ರಸ್ತೆಯನ್ನು ಸರಿಪಡಿಸಬೇಕಾದ ದುಸ್ತಿತಿ. ಅತ್ಯಂತ ಹಳೆಯಕಾಲದ ರಸ್ತೆಯಾಗಿರುವ ಜೋಗಿಬೆಟ್ಟು ಮಂಞನಕಾನ ರಸ್ತೆಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ ..! ಮಳೆಗಾಲದ ನೀರು ಮಧ್ಯ ಮಾರ್ಗದಲ್ಲಿಯೇ ಹರಿದುಹೋಗುತ್ತದೆ.

ಈ ರಸ್ತೆಯು ನೂರಾರು ಮನೆಗಳಿಗೆ ಸಂಪರ್ಕವನ್ನು ನೀಡುತ್ತದೆ . ಈ ಭಾಗದಿಂದ ವಿದ್ಯಾಭ್ಯಾಸಕ್ಕಾಗಿ ಹಲವಾರು ವಿದ್ಯಾರ್ಥಿಗಳು ನಡೆದು ಕೊಂಡು ಹೋಗಬೇಕು . ಇಂದಿನ ಪರಿಸ್ಥಿತಿಯನ್ನು ನೋಡಿದರೆ ನಡೆದುಕೊಂಡು ಹೋಗಲಾರದಷ್ಟು ಹದೆಗೆಟ್ಟಿರುವುದು ಮಾತ್ರ ಬೇಸರದ ಸಂಗತಿ. ದೊಡ್ಡ ದೊಡ್ಡ ಹೊಂಡ ಗುಂಡಿಗಳಿ0ದ ಕೂಡಿದ ಈ ರಸ್ತೆಯಲ್ಲಿ ವಾಹನ ಚಾಲಕರಿಗೆ ನುಂಗಾಲಾದ ತುತ್ತಾಗಿದೆ. ಯಾವ ಸಂಬoಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಿರುಗಿ ನೋಡದ ಇಂತಹ ಮನಕರಗುವಂತಹ ದುಸ್ತಿತಿಯನ್ನು ಕಂಡು ಇಲ್ಲಿನ ಉತ್ತಾಹಿ ಯುವಕರು ಈ ರಸ್ತೆಯನ್ನು ಕೆಲವೆ ಗಂಟೆಗಳಲ್ಲಿ ಸರಿಪಡಿಸಿ ಮೆಚ್ಚುಗೆಗೆ ಪಾತ್ತರಾಗಿದ್ದಾರೆ. ಹದೆಗೆಟ್ಟ ರಸ್ತೆಗೆ ಕಲ್ಲು , ಜಲ್ಲಿ ಹಾಸಿ ತಾತ್ಕಾಲಿಕವಾಗಿ ಸರಿಪಡಿಸಿ ರಸ್ತೆಗೆ ಜೀವ ತುಂಬಿದ್ದಾರೆ . ಈ ಯುವಕರ ಉತ್ಸಾಹ ಕೆಲಸದಿಂದಾಗಿ ಈ ಭಾಗದ ಜನರು ಇಂದು ಸುಗಮವಾಗಿ ವಾಹನ ಚಾಲನೆ ಮಾಡಲು , ನಡೆದಾಡಲು ಆಗುವಂತಾಗಿದೆ. ಈ ಕೆಲಸದಲ್ಲಿ ಶ್ರೀನಿವಾಸ ಭಟ್ ಜೋಗಿಬೆಟ್ಟು, ವಿನೋದ್ ಮಾಳಪ್ಪಮಕ್ಕಿ, ಮಹೇಶ್ ಜೋಗಿಬೆಟ್ಟು, ಉಮೇಶ್ ಜೋಗಿಬೆಟ್ಟು, ವಾಡ್ಯಪ್ಪ ಗೌಡ ಜೋಗಿಬೆಟ್ಟು, ವಿಜಯ್ ಕಾಚಿಲ, ಉಮೇಶ್ ಭಾಗವಹಿಸಿದ್ದರು .


“ಸಂಬ0ಧ ಪಟ್ಟ ಅಧಿಕಾರಿಗಳು/ ಇಲಾಖೆಗಳು ಇಂತಹ ರಸ್ತೆಗಳನ್ನು ಗುರುತಿಸಿ ಮಳೆಗಾಲ ಆರಂಭವಾಗುವ ಮೊದಲೆ ವೈಜ್ಞಾನಿಕವಾಗಿ ಚರಂಡಿ ವ್ಯವಸ್ಥೆ ಮಾಡುವುದು, ಅಥವಾ ಅಂತಹ ರಸ್ತೆಗಳನ್ನು ಕಾಂಕ್ರೀಟ್ / ಡಾಮರೀಕರಣ ಮಾಡಿದರೆ ವಿದ್ಯಾರ್ಥಿಗಳಿಗೆ, ನಡೆದುಕೊಂಡು ಹೋಗುವ ಜನರಿಗೆ , ವಾಹನ ಚಾಲಕರಿಗೆ ಉಪಯೋಗ ಆಗುತ್ತದೆ.

  • ಭಾಸ್ಕರ ಜೋಗಿಬೆಟ್ಟು ರಿಕ್ಷಾ ಚಾಲಕರು