ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಆಟಿ ಉತ್ಸವದ ಸಂಭ್ರಮ.

0

ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಆಟಿ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಧ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಕಾರ್ಯಕ್ರಮ ಮೆರುಗುಗೊಳಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಲೇಜಿನ ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್,ಡಾ.ಅಭಿಜ್ಞಾ ಆರ್ ಪ್ರಸಾದ್ ಹಾಗೂ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ಡಾ.ಸ್ಮಿತಾ ಉಜ್ವಲ್, ಕೆವಿಜಿ ಐಪಿಎಸ್ ನ ಉಪನ್ಯಾಸಕಿ ಶ್ರೀಮತಿ ಹರ್ಷಿತಾ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾ ರ್ಥಿಗಳಿಗಾಗಿ ರಂಗೋಲಿ ಸ್ಪರ್ಧೆ, ತುಳುನಾಡಿನ ಆಟಿ ಸಂಸ್ಕೃತಿಯ ವಿವಿಧ ಖಾದ್ಯ ಸ್ಪರ್ಧೆ, ದೇಶ ಭಕ್ತಿ ಆಧಾರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಆಟಿ ಖಾದ್ಯದ ತೀರ್ಪುಗಾರರಾಗಿ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿಯರಾದ ಡಾ. ಸವಿತಾ ಸಿ ಕೆ, ಡಾ. ರೇಖಾ ಎ ಎ ,ಡಾ. ಸುರೇಖಾ ಅವರು ಆಗಮಿಸಿದ್ದರು.ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ತೀರ್ಪುಗಾರರಾಗಿ ಶ್ರೀ ಲೋಕೇಶ್ ಊರುಬೈಲು ಹಾಗೂ ಶ್ರಿಮತಿ ನೀಲವೇಣಿ ಅವರು ಆಗಮಿಸಿದ್ದರು.ರಂಗೋಲಿ ಸ್ಪರ್ಧೆಯ ತೀರ್ಪುಗಾರರಾಗಿ ಕೆವಿಜಿ ಐಪಿಎಸ್ ನ ಉಪನ್ಯಾಸಕರಾದ ಶ್ರೀ ಮೆಲ್ವಿನ್ ಪಯಸ್, ಶ್ರೀಮತಿ ಹೇಮಲತ ಅವರು ಆಗಮಿಸಿದ್ದರು.

ಕಾರ್ಯಕ್ರಮಕ್ಕೆ ಕಾಲೇಜಿನ ಮ್ಯಾನಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ ವಿ, ಕಾಲೇಜಿನ ಸಿ ಇ ಒ ಡಾ.ಉಜ್ವಲ್ ಯು ಜೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ಮತ್ತು ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್ ಹಾಗೂ ಕಾಲೇಜಿನ ಭೋದಕ ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.