ಪಂಜ:ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮದ ಪೂರ್ವ ಬಾವಿ ಸಭೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ಪಂಜ ವಲಯ ಇದರ ವತಿಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಡಿ.11 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆಯಿತು.

ಸುಳ್ಯ ತಾಲೂಕಿನ ಯೋಜನಾಧಿಕಾರಿ ಮಾಧವ ರವರು ಕಾರ್ಯಕ್ರಮಕ್ಕೆ ಮಾಡಬೇಕಾದ ತಯಾರಿ ಬಗ್ಗೆ , ಎಲ್ಲರಿಗೂ ಜವಾಬ್ದಾರಿ ನೀಡುವುದರ ಮೂಲಕ ಮಾಹಿತಿ ನೀಡಿದರು .

ಜಿಲ್ಲಾ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಶಿವಪ್ರಸಾದ್ ಮಾದನ ಮನೆ, ಒಕ್ಕೂಟದ ವಲಯಧ್ಯಕ್ಷ ಧರ್ಮಪಾಲ ಕಣ್ಕಲ್, ತಾಲೂಕಿನ ಜನಜಾಗೃತಿ ನಿಕಟಪೂರ್ವ ಅಧ್ಯಕ್ಷ ಮೊನಪ್ಪಗೌಡ ಬೊಳ್ಳಾಜೆ, ಪ್ರಗತಿಪರ ಕ್ರಷಿಕರು ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ ಹಾಗೂ ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರು ಹಾಗೂ ವಲಯ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯಧಿಕಾರಿಗಳು,ಸೇವಾ ಪ್ರತಿನಿಧಿಯವರು , ಒಕ್ಕೂಟದ ಪದಾಧಿಕಾರಿಗಳು, ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿಯವರು, ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.