ನಿಂತಿಕಲ್ಲು: ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ – ವರ್ಷ ವೈಭವ

0

ನಿಂತಿಕಲ್ಲಿನ ವರ್ಷ ನಗರದಲ್ಲಿರುವ ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ -ವರ್ಷ ವೈಭವ ಡಿ. 10ರಂದು ಕಾಲೇಜಿನ ಬಯಲು ರಂಗಮಂದಿರದಲ್ಲಿ ನಡೆಯಿತು. ಬೆಳಿಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಸದಾನಂದ ರೈ ಕೂವೆಂಜ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಪರಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ವಹಿಸಿದ್ದರು. ‌ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸರ್ಕಾರಿ ಪ್ರೌಢಶಾಲೆ ಎಣ್ಮೂರು ಇದರ ಮುಖ್ಯ ಗುರುಗಳಾದ ಟೈಟಸ್ ವರ್ಗೀಸ್ ಮಾತನಾಡಿ, ವಿದ್ಯಾರ್ಥಿಗಳ ಗುರಿಯನ್ನು ತಲುಪಲು ಪ್ರಯತ್ನ ಪಡಬೇಕು. ಎಲ್ಲರ ಗುರಿ ಒಂದೇ ಆಗಿರುವುದಿಲ್ಲ. ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಬಾಲಕ್ರಷ್ಣರೈ ಪಾದೆಕಲ್ಲು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುದರ್ಶನ ಪಟ್ಟಾಜೆ, ಉಪಾಧ್ಯಕ್ಷೆ ಶ್ರೀಮತಿ ಯಮುನಾ ಕಾರ್ಜ, ಸಂದರ್ಭೋಚಿತವಾಗಿ ಮಾತನಾಡಿದರು. ಶಿಕ್ಷಕ ರಕ್ಷಕ ಸಂಘದ ಪೂರ್ವಾಧ್ಯಕ್ಷ ಕುಮಾರಸ್ವಾಮಿ ಕೆ.ಎಸ್ ಶುಭ ಹಾರೈಸಿದರು. ಶ್ರೀಮತಿ ಯಮುನಾ ಕಾರ್ಜ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂಸ್ಥೆಯಲ್ಲಿ 15 ವರ್ಷಗಳ ಅನುಭವವನ್ನು ಹಂಚಿಕೊಂಡರು. ತರಬೇತಿ ಅಧಿಕಾರಿ ದಯಾನಂದ ಕೆ.ಎಸ್, ಕೆ.ಎಸ್. ಗೌಡ ಪ್ರೌಢಶಾಲೆಯ ಮುಖ್ಯ ಗುರುಗಳಾದ ಉಮೇಶ್ ಗೌಡ ಎಚ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಜಿತ್ ಐವರ್ನಾಡು, ವಿದ್ಯಾರ್ಥಿ ನಾಯಕ ವಿಖ್ಯಾತ್ ಗೌಡ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಸದಾನಂದ ರೈ ಕೂವೆಂಜ ವರದಿ ವಾಚಿಸಿದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಉಪನ್ಯಾಸಕರಾದ ಉಜ್ವಲ್ ಕೆ.ಎಚ್ ನಿರೂಪಿಸಿದರು. ಉಪನ್ಯಾಸಕಿ ಜಾಸ್ಮಿನ್ ಸ್ವಾಗತಿಸಿ, ಉಪನ್ಯಾಸಕಿ ಸಂಧ್ಯಾ ವಂದಿಸಿದರು. ಉಪನ್ಯಾಸಕ ಜೀವನ್ ಹಾಗೂ ಉಪನ್ಯಾಸಕಿ ಜ್ಯೋತ್ಸ್ನಾ ಪ್ರಶಸ್ತಿ ವಿಜೇತರ ವಿವರವನ್ನು ನೀಡಿದರು. ಉಪನ್ಯಾಸಕಿ ವೇದಾವತಿ ಅತಿಥಿಗಳನ್ನು ಗೌರವಿಸಿದರು. ನಂತರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನೆರವೇರಿತು. ವಿದ್ಯಾರ್ಥಿಗಳೇ ಕೊರಿಯೋಗ್ರಫಿ ಮಾಡಿದ ಭರತ ನಾಟ್ಯ, ಫ್ಯೂಶನ್ ಡಾನ್ಸ್, ಫಿಲ್ಮಿ ಡಾನ್ಸ್, ಖವ್ವಾಲಿ ನ್ರತ್ಯ, ಒಪ್ಪಣಂ, ಜಾನಪದ ನೃತ್ಯ, ದೇಶಭಕ್ತಿಯನ್ನು ಬಿಂಬಿಸುವ ಆರ್ಮಿ ಡಾನ್ಸ್, ನಮಸ್ತೆ ಮಾತ್ರ್ ಭೂಮೆ ನ್ರತ್ಯ, ರೂಪಕಗಳಾದ ನಮೋ ಮಂಜುನಾಥ, ರಾಧಾಕೃಷ್ಣ, ನವಶಕ್ತಿವೈಭವ ಮೈಮ್ ಶೋಗಳು, ಬಂಜಾರ ಡಾನ್ಸ್ ಹಾಗೂ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಫಲ್ ರೈ ಪಿಜಕ್ಕಳ ರಚಿಸಿ, ನಿರ್ದೇಶಿಸಿ ನಟಿಸಿರುವ ತುಳು ನಾಟಕ ಜಾನಕ್ಯಕ್ಕನ ಸಂಸಾರ ನಡೆಯಿತು. ವರ್ಷ ವೈಭವವನ್ನು ಉಪನ್ಯಾಸಕಿ ಸೌಮ್ಯ ನಿರೂಪಿಸಿದರು. ಉಪನ್ಯಾಸಕಿ ಸಮೀಕ್ಷಾ ತಾಂತ್ರಿಕ ಸಹಕಾರ ನೀಡಿದರು.